alex Certify BIG NEWS: ಯೋಗ ಮಾಡುತ್ತಿರುವ ಮೋದಿ ಎನ್ನಲಾದ ವಿಡಿಯೋ ಹಿಂದಿದೆ ಈ ಅಸಲಿ ಸತ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯೋಗ ಮಾಡುತ್ತಿರುವ ಮೋದಿ ಎನ್ನಲಾದ ವಿಡಿಯೋ ಹಿಂದಿದೆ ಈ ಅಸಲಿ ಸತ್ಯ….!

A Video of BKS Iyengar Performing Yoga is Going Viral as PM Modi's 'Rare' Clip

ಯೋಗದ ಅತಿ ದೊಡ್ಡ ಪ್ರತಿಪಾದಕರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಖುದ್ದು ತಾವೇ ಅನೇಕ ಯೋಗಾಸನಗಳಲ್ಲಿ ಭಾಗಿಯಾಗಿರುವ ಅನೇಕ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಾರೆ.

ಬಿಜೆಪಿ ಸಂಸದ ಮನೋಜ್ ಗೋಯೆಲ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿರುವ ಹಳೆಯ ಚಿತ್ರವೊಂದರಲ್ಲಿ ತರುಣರೊಬ್ಬರು ಬಹಳ ಕಠಿಣವಾದ ಯೋಗಾಸನಗಳನ್ನು ಮಾಡುತ್ತಿರುವುದನ್ನು ನೋಡಬಹುದಾಗಿದೆ.

“ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಪರೂಪರ ಈ ವಿಡಿಯೋದಲ್ಲಿ ಅವರು ’ಯೋಗಿ ರೂಪ’ ನೋಡಬಹುದಾಗಿದೆ” ಎಂದಿದ್ದಾರೆ. ಗೋಯೆಲ್‌ರ ಅನೇಕ ಅನುಯಾಯಿಗಳು ಇದನ್ನು ನಿಜವೆಂದೇ ಭಾವಿಸಿದ್ದಾರೆ.

ಆದರೆ ಈ ದೃಶ್ಯದಲ್ಲಿರುವುದು ಮೋದಿ ಅಲ್ಲ ಎಂದು ಫ್ಯಾಕ್ಟ್‌ ಚೆಕಿಂಗ್ ಮಾಡಿದಾಗ ತಿಳಿದುಬಂದಿದೆ. ಐಯ್ಯಂಗಾರ್‌ ಯೋಗದ ಸ್ಥಾಪಕ ಬಿಕೆಎಸ್ ಐಯ್ಯಂಗಾರ್‌‌ ಅವರು ಈ ವಿಡಿಯೋದಲ್ಲಿ ಇದ್ದಾರೆ. 1938ರ ಕಾಲಘಟ್ಟದ ಈ ವಿಡಿಯೋದಲ್ಲಿ ಯೋಗ ಗುರುಗಳು ತಮ್ಮ ಪಟ್ಟುಗಳನ್ನು ಪ್ರದರ್ಶಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...