alex Certify ಸುದ್ದಿ ಪತ್ರಿಕೆ ಬಳಸಿ ರೈಲಿನ ಮಾಡೆಲ್ ರಚಿಸಿದ 7ನೇ ಕ್ಲಾಸ್ ಹುಡುಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುದ್ದಿ ಪತ್ರಿಕೆ ಬಳಸಿ ರೈಲಿನ ಮಾಡೆಲ್ ರಚಿಸಿದ 7ನೇ ಕ್ಲಾಸ್ ಹುಡುಗ

ಸುದ್ದಿಪತ್ರಿಕೆಗಳ ಹಾಳೆಗಳನ್ನು ಬಳಸಿಕೊಂಡು ಸ್ಟೀಮ್ ಇಂಜಿನ್ ಚಾಲಿತ ಲೋಕೋಮೋಟಿವ್‌ನ ಪ್ರತಿರೂಪವನ್ನು ರಚಿಸಿರುವ ಕೇರಳದ ತ್ರಿಶ್ಶುರಿನ 12 ವರ್ಷದ ಬಾಲಕನೊಬ್ಬ ತನ್ನ ಕ್ರಿಯಾಶೀಲತೆಯಿಂದ ನೆಟ್ಟಿಗರ ಮನಸೂರೆಗೊಂಡಿದ್ದಾನೆ.

ಅದ್ವೈತ್‌ ಕೃಷ್ಣ ಹೆಸರಿನ ಈ ಬಾಲಕ 7ನೇ ಕ್ಲಾ‌ಸ್‌ನಲ್ಲಿ ಓದುತ್ತಿದ್ದು, ಮೂರು ದಿನಗಳ ಅವಧಿಯಲ್ಲಿ 33 ಹಾಳೆ ಹಾಗೂ 10 A4 ಶೀಟ್‌ಗಳನ್ನು ಬಳಸಿಕೊಂಡು ತನ್ನ ಕನಸಿದ ರಚನೆಯನ್ನು ಮಾಡಿದ್ದಾನೆ. ಈತ ತ್ರಿಶ್ಶೂರಿನ CNN ಬಾಲಕರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಬಾಲಕನ ಈ ರೈಲು ಪ್ರೀತಿಯನ್ನು ಮೆಚ್ಚಿಕೊಂಡಿರುವ ರೈಲ್ವೇ ಇಲಾಖೆ, ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಆತ ಹಾಗೂ ಆತನ ಕೆಲಸದ ಫೋಟೋವನ್ನು ಪೋಸ್ಟ್ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...