alex Certify ಪುಟ್ಟ ಮಕ್ಕಳಿರುವ ಪೋಷಕರು ಓದಲೇಬೇಕು ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಕ್ಕಳಿರುವ ಪೋಷಕರು ಓದಲೇಬೇಕು ಈ ಸುದ್ದಿ

ಮನೆಯಲ್ಲಿ ಮಕ್ಕಳಿದ್ದರೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಏನಾದರೂ ಮಗುವಿದ್ದರೆ ಈ ಸುದ್ದಿಯನ್ನು ಮರೆಯದೇ ನೋಡಿ.

ಬರೇಲಿಯಲ್ಲಿರುವ ಭೂಲಾಪುರ ಎನ್ನುವ ಗ್ರಾಮದಲ್ಲಿ, ಒಂದು ವರ್ಷದ ಮಗುವೊಂದು ಅಂಗಳದಲ್ಲಿ ಆಡುತ್ತಿತ್ತು. ಈ ವೇಳೆ ಮಗುವಿನ ಕೈಗೆ ಚಿಕ್ಕ ಹಾವಿನ ಮರಿ ಸಿಕ್ಕಿದ್ದು, ಈ ಮರಿಯನ್ನು ಆಟದ ಸಾಮಾನೆಂದು ನುಂಗಿದೆ. ಅದೃಷ್ಟವಶಾತ್‌ ಮಗುವಿನ ತಾಯಿ ಮಗುವಿನ ಬಾಯಲ್ಲಿ ಏನೋ ವಸ್ತು ಇದೆ ಎಂದು ಹೊರಗೆ ತಗೆದಾಗ ಹಾವನ್ನು ನುಂಗಿರುವ ಅಂಶ ಬೆಳಕಿಗೆ ಬಂದಿದೆ.

ಸುಮಾರು ಆರು ಇಂಚು ಇದ್ದ ಹಾವು ನುಂಗಿರುವ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಮಗು ಇದೀಗ ಆರೋಗ್ಯವಾಗಿದ್ದರೂ, ಮಗುವಿನ ಮೇಲೆ ನಿಗಾ ವಹಿಸಲಾಗಿದೆ. ಮಗು ನುಂಗಿದ್ದ ಹಾವು ಸತ್ತು ಹೋಗಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ಮಗುವಿನ ತಂದೆ ಧರ್ಮಪಾಲ್‌ ಮಾತನಾಡಿದ್ದು, ನನ್ನ ಹೆಂಡತಿ ಸೋಮವತಿ ಮಗುವಿನ ಬಾಯಲ್ಲಿ ಏನೋ ಇರುವುದು ಗಮನಿಸಿ ನೋಡಿದಾಗ ಹಾವು ನುಂಗಿರುವುದು ಬೆಳಕಿಗೆ ಬಂದಿದೆ. ಇದೀಗ ಮಗು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...