alex Certify ಲಾಕ್ ಡೌನ್ ವೇಳೆ ಮಕ್ಕಳ ಹೇರ್ ಕಟ್ ಮಾಡ್ತಿದ್ದಾರೆ ಈ ಸಚಿವರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ವೇಳೆ ಮಕ್ಕಳ ಹೇರ್ ಕಟ್ ಮಾಡ್ತಿದ್ದಾರೆ ಈ ಸಚಿವರು..!

ಕೊರೊನಾ ಸೋಂಕಿನಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಯಲ್ಲಿದೆ. ಜನಸಾಮಾನ್ಯರು ಸೇರಿದಂತೆ ನಾಯಕರು ಮತ್ತು ಮಂತ್ರಿಗಳೂ ಸಹ ಮನೆಯಲ್ಲಿ ಬಂಧಿಯಾಗಿದ್ದಾರೆ. ಮನೆಯಲ್ಲಿರುವ ನಾಯಕರು ಮನೆ ಕೆಲಸಗಳನ್ನು ಮಾಡ್ತಿದ್ದಾರೆ.

ಉತ್ತರ ಪ್ರದೇಶದ ಶಿಕ್ಷಣ ಸಚಿವ ಸತೀಶ್ ದ್ವಿವೇದಿ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ತಮ್ಮ ಮಗ ಮತ್ತು ಮಗಳ ಕೂದಲನ್ನು ಕತ್ತರಿಸುತ್ತಿದ್ದಾರೆ.

ಈ ವಿಡಿಯೋ ವೈರಲ್ ಆದ ನಂತರ ದ್ವಿವೇದಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮಕ್ಕಳ ಕೂದಲು ತುಂಬಾ ಬೆಳೆದಿದೆ. ಲಾಕ್ ಡೌನ್ ಆಗಿರುವುದರಿಂದ ಮನೆಯಿಂದ ಹೊರಬರಲು ಸಾಧ್ಯವಿಲ್ಲ. ಹಾಗಾಗಿ ನಾನೇ ಮಕ್ಕಳ ಕೂದಲು ಕತ್ತರಿಸಲು ನಿರ್ಧರಿಸಿದೆ ಎಂದು ಅವ್ರು ಹೇಳಿದ್ದಾರೆ.

ಮೊದಲು ನಾಲ್ಕು ವರ್ಷದ ಮಗಳ ಕೂದಲನ್ನು ಕತ್ತರಿಸಿದ್ದಾರಂತೆ. ಆದ್ರೆ ಅದು ಸರಿಯಾಗ್ಲಿಲ್ಲ. ನಂತ್ರ ಕೈ ಹೊಂದಿಕೊಂಡಿತು. ಮಗನ ಕೂದಲನ್ನು ಸರಿಯಾಗಿ ಕತ್ತರಿಸಿದ್ದೇನೆಂದು ಸಚಿವರು ಹೇಳಿದ್ದಾರೆ. ಅವರ ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...