alex Certify ಯುವತಿ ಕಿಡ್ನಾಪ್ ಮಾಡಲು ಬಂದಿದ್ದೇ ದುಬಾರಿಯಾಯ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿ ಕಿಡ್ನಾಪ್ ಮಾಡಲು ಬಂದಿದ್ದೇ ದುಬಾರಿಯಾಯ್ತು

ಉತ್ತರ ಪ್ರದೇಶ ಬಾಗಪತ್ ನಲ್ಲಿ ಪ್ರೇಮಿ ಅಪಹರಿಸಲು ಬಂದಿದ್ದೇ ಯುವಕನಿಗೆ ದುಬಾರಿಯಾಗಿ ಪರಿಣಮಿಸಿದೆ. ಗ್ರಾಮಸ್ಥರು ಯುವಕನನ್ನು ಹತ್ಯೆಗೈದಿದ್ದಾರೆ.

ಯುವಕ ಸ್ನೇಹಿತರ ಜೊತೆ ಯುವತಿ ಮನೆಗೆ ಬಂದಿದ್ದ.‌ ಯುವತಿ ಅಪಹರಿಸುವ ಪ್ಲಾನ್ ನಲ್ಲಿ ಬಂದಿದ್ದರು ಎನ್ನಲಾಗಿದೆ. ಗ್ರಾಮಸ್ಥರಿಗೆ ವಿಷ್ಯ ಗೊತ್ತಾಗಿದೆ. ಯುವತಿ ಮನೆಯವರು ಕೂಗಿಕೊಳ್ತಿದ್ದಂತೆ ಜನರು ಸೇರಿದ್ದಾರೆ. ಯುವಕನ ಸ್ನೇಹಿತರು ಶಸ್ತ್ರಾಸ್ತ್ರ ತೋರಿಸುತ್ತ ಅಲ್ಲಿಂದ ಪರಾರಿಯಾಗಿದ್ದಾರೆ. ಆದ್ರೆ ಯುವಕ ಸಿಕ್ಕಿಬಿದ್ದಿದ್ದಾನೆ.

ಯುವಕನ ಮೇಲೆ ಕರುಣೆ ತೋರದ ಜನರು ಆತನನ್ನು ಹೊಡೆದು ಕೊಂದಿದ್ದಾರೆ. ಅನೇಕ ದಿನಗಳಿಂದ ಯುವಕ, ಯುವತಿ ಹಿಂದೆ ಬಿದ್ದಿದ್ದನಂತೆ. ಮದುವೆಯಾಗುವಂತೆ ಪೀಡಿಸುತ್ತಿದ್ದನಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...