alex Certify 500 ವರ್ಷ ಹಳೆಯ ಅಪರೂಪದ ಶಿವನ ವಿಗ್ರಹ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

500 ವರ್ಷ ಹಳೆಯ ಅಪರೂಪದ ಶಿವನ ವಿಗ್ರಹ ವಶಕ್ಕೆ

ನಿರೀಕ್ಷೆಯಂತೆ ನಡೆದಿದ್ದರೆ 500 ವರ್ಷಗಳಷ್ಟು ಹಳೆಯದಾದ ಅಪರೂಪದ ಶಿವನ ವಿಗ್ರಹವು 25 ಕೋಟಿ ರೂಪಾಯಿಗೆ ಮಾರಾಟವಾಗುವುದರಲ್ಲಿತ್ತು. ಆದರೆ ತಮಿಳುನಾಡು ಪೊಲೀಸ್ ಐಡಲ್ ವಿಂಗ್‌ನ ರಹಸ್ಯ ಕಾರ್ಯಾಚರಣೆಯಿಂದ ಮಾರಾಟಗಾರ ಕಳ್ಳರು ಸಿಕ್ಕಿಬಿದ್ದಿದ್ದಾರೆ.

ಪುರಾತನವಾದ ಪಚ್ಚೆ ಶಿವಲಿಂಗವನ್ನು ಲೋಹದ ವಿಗ್ರಹದೊಂದಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಚೆನ್ನೈ ಬಳಿಯ ಪೂನ್ನಮಲೈಯಲ್ಲಿ ಮಾರಾಟಗಾರರನ್ನು ಪೊಲೀಸರು ರಹಸ್ಯವಾಗಿ ಸಂಪರ್ಕಿಸಿದರು, ಶ್ರೀಮಂತ ಕಲಾ ಸಂಗ್ರಾಹಕರಂತೆ ನಟಿಸಿ 25 ಕೋಟಿ ರೂ. ಕೊಡಲೂ ಸಹ ಒಪ್ಪಿಕೊಂಡಿದ್ದರು. ಮಾರಾಟಗಾರರು ತಮ್ಮ ರಹಸ್ಯ ಕೊಠಡಿಯಿಂದ ವಿಗ್ರಹವನ್ನು ಹೊರತೆಗೆಯುತ್ತಿದ್ದಂತೆ, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ.

ಏಕಮುಖ ಲಿಂಗವು ಲೋಹದ ನಾಗಾಭರಣವನ್ನು ಹೊಂದಿದೆ. ನಾಗಾಭರಣದ ಕೆಳಭಾಗದಲ್ಲಿ ವಿಶಿಷ್ಟವಾಗಿ ಶಿವನ ಐದು ಮುಖ ಇದೆ. ಡಮರು, ತ್ರಿಶೂಲ, ಹಾವು ಮುಂತಾದವು ಕಾಣಿಸುತ್ತದೆ. ತಜ್ಞರ ಪ್ರಕಾರ ಈ ವಿಗ್ರಹವು 500 ವರ್ಷಗಳಷ್ಟು ಹಳೆಯದಾಗಿದೆ.

ವಿಗ್ರಹದ ಮೂಲವನ್ನು ತನಿಖೆ ನಡೆಸುತ್ತಿದ್ದು, ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಿದಾಗ ಹೆಚ್ಚಿನ ವಿವರಗಳು ಹೊರಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...