alex Certify ಒತ್ತಡ, ಚಿಂತೆ ದೂರವಾಗಿ ಚೆನ್ನಾಗಿ ನಿದ್ರೆ ಬರಬೇಕೆಂದರೆ ತಪ್ಪದೇ ಮಾಡಿ ಈ ಯೋಗಾಸನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡ, ಚಿಂತೆ ದೂರವಾಗಿ ಚೆನ್ನಾಗಿ ನಿದ್ರೆ ಬರಬೇಕೆಂದರೆ ತಪ್ಪದೇ ಮಾಡಿ ಈ ಯೋಗಾಸನ

ನಿಮ್ಮಲ್ಲಿರುವ ಒತ್ತಡ, ಚಿಂತೆ ನಿಮ್ಮನ್ನು ನಿದ್ರೆ ಮಾಡಲು ಬಿಡುವುದಿಲ್ಲ. ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು. ಹಾಗಾಗಿ ನಿಮಗೆ ರಾತ್ರಿಯ ವೇಳೆ ಹಾಸಿಗೆಯ ಮೇಲೆ ಬಿದ್ದ ತಕ್ಷಣ ಹಾಗೂ ಉತ್ತಮವಾದ ನಿದ್ರೆಗೆ ಜಾರಲು ಪ್ರತಿದಿನ ಈ ಯೋಗಾಸನಗಳನ್ನು ಮಾಡಿ.

* ಬಾಲಾಸನ: ನೆಲದ ಮೇಲೆ ಮೊಣಕಾಲಿನಲ್ಲಿ ಕುಳಿತು. ದೇಹವನ್ನು ಮುಂದಕ್ಕೆ ಚಾಚಿ ಬೆನ್ನು ನೇರವಾಗಿ ಇರಲಿ. ನಿಮ್ಮ ಹಣೆ ನೆಲವನ್ನು ಸ್ಪರ್ಶಿಸಲಿ. ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ ಉಸಿರಾಡಿ. ಸ್ವಲ್ಪ ಸಮಯ ಈ ಭಂಗಿಯಲ್ಲಿ ಇರಿ.

*ಹಲ್ಲಿ ಭಂಗಿ(ಲಿಜರ್ಡ್ ಪೋಸ್) : ನಿಮ್ಮ ಹೊಟ್ಟೆಯ ಮೇಲೆ ಚಾಪೆಯ ಮೇಲೆ ಮಲಗಿ ನಿಮ್ಮ ಅಂಗೈಗಳನ್ನು ಕಿವಿಗಳ ಬಳಿ ಇರಿಸಿ. ನಿಮ್ಮ ಕಾಲ್ಬೆರಳುಗಳನ್ನು ನೆಲದಲ್ಲಿಡಿ. ನಿಮ್ಮ ಬಲ ಪಾದವನ್ನುಮುಂದಕ್ಕೆ ತಂದು ನಿಮ್ಮ ಬಲಗೈಯ ತುದಿಯಲ್ಲಿ ಇರಿಸಿ. ಈ ಭಂಗಿಯಲ್ಲಿ ಕನಿಷ್ಠ 5 ನಿಮಿಷ ಉಸಿರಾಡಿ. ಬಳಿಕ ಆರಂಭಿಕ ಸ್ಥಾನಕ್ಕೆ ಹೋಗಿ ನಿಮ್ಮ ಎಡಪಾದವನ್ನು ಮುಂದೆ ತಂದು ಎಡಗೈಯ ಪಕ್ಕ ಇಡಿ.

*ಶವಾಸನ : ಕಣ್ಣು ಮುಚ್ಚಿ ನಿಮ್ಮ ಬೆನ್ನಿನ ಮೇಲೆ ಮಲಗಿ. ನಿಮ್ಮ ಕಾಲುಗಳನ್ನು ಆರಾಮವಾಗಿಡಿ. ನಿಮ್ಮ ಕೈಗಳನ್ನು ಪಕ್ಕದಲ್ಲಿ ಇರಿಸಿ. ನಿಧಾನವಾಗಿ ಉಸಿರಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...