alex Certify ʼವಿಟಮಿನ್ ಸಿʼ ಸೇವನೆ ಅಧಿಕವಾದರೆ ದೇಹದಲ್ಲಿ ಈ ಸಮಸ್ಯೆ ಕಾಡುವುದು ಖಂಡಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಟಮಿನ್ ಸಿʼ ಸೇವನೆ ಅಧಿಕವಾದರೆ ದೇಹದಲ್ಲಿ ಈ ಸಮಸ್ಯೆ ಕಾಡುವುದು ಖಂಡಿತ

ವಿಟಮಿನ್ ಸಿ ನಮ್ಮ ದೇಹ, ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಆದರೆ ವಿಟಮಿನ್ ಸಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಹಾನಿಯಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳಿ.

-ದೇಹದಲ್ಲಿ ವಿಟಮಿನ್ ಸಿ ಅಧಿಕವಾದಾಗ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಾಗುತ್ತದೆ. ಈ ಕಾರಣದಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ.

-ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಮೂತ್ರಪಿಂಡ ಹಾಳಾಗುತ್ತದೆ. ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯುವ ಅಪಾಯವು ಹೆಚ್ಚಾಗುತ್ತದೆ.

-ವಿಟಮಿನ್ ಸಿ ಹೊಟ್ಟೆಯನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ. ಆದರೆ ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬಿಕೊಳ್ಳುತ್ತದೆ.

-ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ತಲೆನೋವು ಉಂಟಾಗುತ್ತದೆ. ಹಾಗಾಗಿ ಅದನ್ನು ಮಿತವಾಗಿ ಸೇವಿಸಿ.

*ವಿಟಮಿನ್ ಸಿ ಯ ಅತಿಯಾದ ಸೇವನೆಯು ನಿದ್ರಾಹೀನತೆಗೆ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...