alex Certify ಐಡಿಬಿಐ ಬ್ಯಾಂಕ್ ನೀಡ್ತಿದೆ ವಾರ್ಷಿಕ 1 ಕೋಟಿ‌ ರೂ. ಗಳಿಸುವ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಡಿಬಿಐ ಬ್ಯಾಂಕ್ ನೀಡ್ತಿದೆ ವಾರ್ಷಿಕ 1 ಕೋಟಿ‌ ರೂ. ಗಳಿಸುವ ಅವಕಾಶ

आईडीबीआई बैंक (IDBI Bank)

ಕೊರೊನಾ ಸಂದರ್ಭದಲ್ಲಿ ಐಡಿಬಿಐ ಬ್ಯಾಂಕ್ ಗಳಿಕೆಗೆ ಅವಕಾಶ ನೀಡ್ತಿದೆ. ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ ಐಟಿ ಮುಖ್ಯಸ್ಥರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಯ ಆರಂಭಿಕ ಅಧಿಕಾರಾವಧಿ ಮೂರು ವರ್ಷಗಳು. ಆದರೆ ಅದನ್ನು ಐದು ವರ್ಷಗಳವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ಈ ಹುದ್ದೆಗೆ ಬ್ಯಾಂಕ್ ವಾರ್ಷಿಕ 1 ಕೋಟಿ ರೂಪಾಯಿ  ಸಂಬಳ ನೀಡ್ತಿದೆ.

ಅರ್ಜಿಗಳನ್ನು ಸಲ್ಲಿಸಲು ಜೂನ್ 16 ಕೊನೆ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜೂನ್ 16 ರೊಳಗೆ  recruitment@idbi.co.in ಗೆ ಕಳುಹಿಸಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 20 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಐಟಿ ವಿಭಾಗದಲ್ಲಿ ಕೆಲಸ ಮಾಡಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 45 ವರ್ಷಗಳು. ಗರಿಷ್ಠ ವಯಸ್ಸು 55 ವರ್ಷಗಳು. ಆಯ್ಕೆಯಾದ ಅಭ್ಯರ್ಥಿ ಮುಂಬೈ ಅಥವಾ ಬೇರೆ ಬ್ರಾಂಚ್ ನಲ್ಲಿ ಕೆಲಸ ಮಾಡಬೇಕಾಗುತ್ತದೆ.

https://www.idbibank.in/index.asp ವೆಬ್ಸೈಟ್ ನಲ್ಲಿ ಕರಿಯರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕರೆಂಟ್ ಓನ್ಲಿಂಗ್ ಆಯ್ಕೆಗೆ ಹೋದಲ್ಲಿ ಇದ್ರ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...