alex Certify ‘ಖೋವಾ’ ಶುದ್ಧವಾಗಿದೆ ಎಂದು ತಿಳಿಯುವುದು ಹೇಗೆ….?‌ ಪರೀಕ್ಷಿಸಲು ಅನುಸರಿಸಿ ಈ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಖೋವಾ’ ಶುದ್ಧವಾಗಿದೆ ಎಂದು ತಿಳಿಯುವುದು ಹೇಗೆ….?‌ ಪರೀಕ್ಷಿಸಲು ಅನುಸರಿಸಿ ಈ ವಿಧಾನ

ಸಿಹಿ ತಿಂಡಿಗಳಿಗೆ ಬಳಸಲಾಗುವ ಖೋವಾ ಶುದ್ಧವಾಗಿರಬೇಕು. ಮಾರುಕಟ್ಟೆಯಲ್ಲಿ ಸಿಗುವ ಖೋವಾದಲ್ಲಿ ಕೆಲವೊಮ್ಮೆ ಹಿಟ್ಟು, ಸ್ಟಾರ್ಚ್, ರವೆ ಇತ್ಯಾದಿಗಳು ಕಲಬೆರಕೆ ಆಗಿರುವ ಸಾಧ್ಯತೆ ಇರುತ್ತದೆ. ಕಲಬೆರಕೆ ಪರೀಕ್ಷಿಸಲು ಈ ವಿಧಾನಗಳನ್ನು ಅನುಸರಿಸಿ.

* ಖೋವಾವನ್ನು ಸ್ವಲ್ಪ ಬಿಸಿ ನೀರಿಗೆ ಹಾಕಿ ತಣಿಸಿ. ಆಮೇಲೆ ಈ ದ್ರಾವಣಕ್ಕೆ ಒಂದು ಹನಿ ಅಯೋಡಿನ್ ಹಾಕಿ. ಈಗ ಖೋವಾ ನೀಲಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಸ್ಟಾರ್ಚ್ ಬೆರಕೆಯಾಗಿದೆ ಎಂದು ಅರ್ಥ.

* ತಾಜಾ ಮತ್ತು ಶುದ್ಧ ಖೋವಾ ಸಾಮಾನ್ಯವಾಗಿ ತರಿತರಿಯಾಗಿ ಇರುತ್ತದೆ. ಸ್ವಲ್ಪ ಖೋವಾವನ್ನು ಅಂಗೈಯಲ್ಲಿ ಉಜ್ಜಿ ರುಚಿ ನೋಡಿ. ಖೋವಾ ಸ್ವಲ್ಪ ಸಿಹಿಯಾಗಿದ್ದರೆ ಮತ್ತು ಅಂಗೈ ಜಿಡ್ಡು ಆಗಿದ್ದರೆ ಅದು ಕಲಬೆರಕೆ ಆಗಿರುವ ಸಾಧ್ಯತೆ ಇರುತ್ತದೆ.

* ಬೌಲ್ ಗೆ ಸ್ವಲ್ಪ ಖೋವಾ ಹಾಕಿ. ಇದಕ್ಕೆ ಸ್ವಲ್ಪ ಸಲ್ಫ್ಯೂರಿಕ್ ಆಮ್ಲ ಬೆರೆಸಿ. ಈ ಖೋವಾ ನೀಲಿ ಅಥವಾ ಬೂದು ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಫಾರ್ಮಲಿನ್ ಎಂಬ ಪ್ರಿಸರ್ವೇಟಿವ್ ಬೆರೆತಿರುವ ಸಾಧ್ಯತೆ ಇರುತ್ತದೆ.

* ಒಂದು ಬೌಲ್ ಖೋವಾಗೆ ಸ್ವಲ್ಪ ಸಕ್ಕರೆ ಬೆರೆಸಿ ಕುದಿಯಲು ಇಡಿ. ಈ ಸಂದರ್ಭದಲ್ಲಿ ಮಿಶ್ರಣ ನೀರು ಬಿಡಲು ಆರಂಭಿಸಿದರೆ ಖೋವಾ ಕಲಬೆರಕೆ ಆಗಿದೆ ಎಂದರ್ಥ.

* ಮಾರುಕಟ್ಟೆಯಲ್ಲಿ ಖರೀದಿಸುವ ಖೋವಾ ಪ್ಯಾಕೆಟ್ ನ ಉತ್ಪಾದನಾ ದಿನಾಂಕ ನೋಡಿ. ಪ್ಯಾಕೆಟ್ ನಲ್ಲಿರುವ ಖೋವಾವನ್ನು 2 ದಿನಗಳ ನಂತರ ಬಳಸಬಾರದು.

* ಖೋವಾ ರುಚಿ ಹಸಿ ಹಾಲಿನಂತಿದ್ದರೆ ಆ ಖೋವಾ ಶುದ್ಧವಾಗಿದೆ ಎಂದು ಅರ್ಥ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...