alex Certify ‘ಕಾರ್ಗಿಲ್​ ವೀರ’ರಿಗೆ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದ ಭಾರತೀಯ ಸೇನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾರ್ಗಿಲ್​ ವೀರ’ರಿಗೆ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದ ಭಾರತೀಯ ಸೇನೆ….!

22ನೇ ಕಾರ್ಗಿಲ್ ವಿಜಯ್​ ದಿವಸ್​ ಅಂಗವಾಗಿ ಭಾರತೀಯ ಸೇನೆ ಕಾಶ್ಮೀರದ ಕಣಿವೆ ಹಾಗೂ ಲಡಾಖ್​​ನ ಭಯಾನಕ ಪರ್ವತಗಳಲ್ಲಿ 1000 ಕಿಲೋಮೀಟರ್​ಗಿಂತಲೂ ಹೆಚ್ಚು ದೂರದವರೆಗೆ 2 ಬೈಕ್​ ರ್ಯಾಲಿಗಳನ್ನು ನಡೆಸಿದೆ. ಡ್ರಾಸ್​ನಲ್ಲಿರುವ ಐತಿಹಾಸಿಗ ಕಾರ್ಗಿಲ್​ ಯುದ್ಧ ಸ್ಮಾರಕದಲ್ಲಿ ಸೇರಿದ ಭಾರತೀಯ ಸೇನೆ ಹುತಾತ್ಮರಿಗೆ ಗೌರವ ಸಲ್ಲಿಸಿದೆ.

ಒಂದು ಬೈಕ್​​ ರ್ಯಾಲಿಯನ್ನು ಮುನ್ನೆಡಿಸಿದ ಉತ್ತರ ಸೈನ್ಯದ ಕಮಾಂಡರ್​ ಲೆಫ್ಟಿನಂಟ್​ ಜನರಲ್​ ವೈ.ಕೆ. ಜೋಶಿ ಕೂಡ ಸ್ವತಃ ಕಾರ್ಗಿಲ್​ ಹೀರೋ ಆಗಿದ್ದಾರೆ. 11,649 ಅಡಿಯಲ್ಲಿರುವ ಭಯಾನಕ ಜೋಜಿಲಾ ಪಾಸ್​ನ್ನು ಬೈಕ್​ ಸವಾರರು ದಾಟುವ ಮುನ್ನ ವೈ.ಕೆ ಜೋಶಿ ಹೌ ಈಸ್​ ದ ಜೋಶ್​..? (How is the josh..?) ಎಂದು ಕೇಳಿದ್ದಾರೆ. ಇದಕ್ಕೆ ಸವಾರರು ಹೈ ಸರ್​ (High Sir) ಎಂದು ಉತ್ತರ ನೀಡಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಟ್ವಿಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದ್ದು ಆರ್ಮಿ ಕಮಾಂಡರ್​ ತಂಡವನ್ನ ಮುನ್ನಡೆಸೋದು ಅಂದರೆ ಜೋಶ್​ ಹೆಚ್ಚಾಗಿಯೇ ಇರಬೇಕು ಎಂದು ಶೀರ್ಷಿಕೆ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...