alex Certify ಟೋಲ್ ಪ್ಲಾಜಾದಲ್ಲಿ ಅವಘಡ: ತಪ್ಪಿದ ಭಾರೀ ದುರಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಲ್ ಪ್ಲಾಜಾದಲ್ಲಿ ಅವಘಡ: ತಪ್ಪಿದ ಭಾರೀ ದುರಂತ

ಲಕ್ನೋ: ಟೋಲ್ ಪ್ಲಾಜಾ ಬಳಿ ಸಾಗಿ ಬಂದ ಟ್ರಕ್ ಒಂದು ನಿಯಂತ್ರಣ ತಪ್ಪಿ ಇನ್ನೇನು ಅಪಘಾತ ಸಂಭವಿಸುತ್ತೆ ಅನ್ನೋವಾಗ, ಚಾಲಕ ವಾಹನವನ್ನು ಮರಳಿ ನಿಯಂತ್ರಣಕ್ಕೆ ಪಡೆಯುವ ಮುಖಾಂತರ ಭಾರಿ ಅನಾಹುತವೊಂದನ್ನು ತಪ್ಪಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ದಾದ್ರಿ-ಲುಹರ್ಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಟೋಲ್ ಪ್ಲಾಜಾ ಕಡೆಗೆ ಬಂದ ಟ್ರಕ್, ರಸ್ತೆಯ ಮಧ್ಯ ಭಾಗದಿಂದ ಟೋಲ್ ಬೂತ್ ನ ಲೇನ್ ಮೂಲೆಗೆ ತಿರುಗಿ ವಿಭಜಕಗಳನ್ನು ಹೊಡೆದುರುಳಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಮುಂದೆ ಎರಡು ವಾಹನಗಳಿದ್ದು, ಇನ್ನೇನು ಡಿಕ್ಕಿ ಹೊಡೆಯುತ್ತೆ ಅಂದಾಗ ಚಾಲಕ ಟ್ರಕ್ ನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸಿದ್ದಾನೆ.

2020ರ ಡಿಸೆಂಬರ್ ನಲ್ಲಿ ಮಧ್ಯಪ್ರದೇಶದ ಟೋಲ್ ಪ್ಲಾಜಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದಾರುಣವಾಗಿ ಮೃತಪಟ್ಟಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...