alex Certify ಟ್ರಾಕ್ಟರ್ ಗೆ ಟ್ರಕ್ ಡಿಕ್ಕಿ: ನಾಲ್ವರು ಸಾವು: 12 ಮಂದಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಕ್ಟರ್ ಗೆ ಟ್ರಕ್ ಡಿಕ್ಕಿ: ನಾಲ್ವರು ಸಾವು: 12 ಮಂದಿಗೆ ಗಾಯ

ರಾಮ್ ಪುರ: ಉತ್ತರ ಪ್ರದೇಶ ರಾಮ್ ಪುರ ಜಿಲ್ಲೆಯ ಮಿಲಾಕ್ ಪ್ರದೇಶದಲ್ಲಿ ಟ್ರ್ಯಾಕ್ಟರ್ ಟ್ರಾಲಿಗೆ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಸುಮಾರು ಒಂದು ಡಜನ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಧರ್ಮಪುರ ಗ್ರಾಮದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಲಾರಿ ಚಾಲಕನ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ. ಮೃತರನ್ನು ಕವಿತಾ (18), ಟಿಂಕು ಯಾದವ್ ಅಲಿಯಾಸ್ ರವಿ (18), ರಾಮಾವತಿ (45) ಮತ್ತು ಸಾವಿತ್ರಿ (30) ಎಂದು ಗುರುತಿಸಲಾಗಿದೆ.

ಅವರು ಮೊರಾದಾಬಾದ್‌ನಿಂದ ಬರೇಲಿಗೆ ಮರಳುತ್ತಿದ್ದರು. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...