alex Certify ಪುಟಾಣಿ ಸ್ಕೂಟರ್‌ಗಳಿಗೆ ಭಾರತದಲ್ಲಿ ಪೇಟೆಂಟ್ ಪಡೆದ ಹೋಂಡಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟಾಣಿ ಸ್ಕೂಟರ್‌ಗಳಿಗೆ ಭಾರತದಲ್ಲಿ ಪೇಟೆಂಟ್ ಪಡೆದ ಹೋಂಡಾ

1960ರಲ್ಲಿ ಬಿಡುಗಡೆಯಾದ ಹೋಂಡಾ ಡ್ಯಾಕ್ಸ್ ಹಾಗೂ ಕಬ್ ಸ್ಕುಟರ್‌ಗಳು ಚೀನೀ ಹಾಗೂ ಐರೋಪ್ಯ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯವಾಗಿದ್ದವು. ಈ ರೆಟ್ರೋ ಮಾಡೆಲ್‌ಗಳನ್ನು ನಿಲ್ಲಿಸುವ ಮೂಡ್‌ನಲ್ಲಿಲ್ಲದ ಹೋಂಡಾ ಇದೀಗ ಇವುಗಳಿಗೆ ಎಲೆಕ್ಟ್ರಿಕ್ ಸ್ಪರ್ಶ ಕೊಟ್ಟಿದ್ದು, ಡ್ಯಾಕ್ಸ್‌ ಇ ಹಾಗೂ ಜ಼ೂಮರ್‌ ಇ ಎಂಬ ಹೊಸ ಅವತಾರಗಳನ್ನು ತಂದು ಚೀನಾದಲ್ಲಿ ಬಿಡುಗಡೆ ಮಾಡಿದೆ.

ಪ್ರತಿದಿನವೂ ಒಂದಿಲ್ಲೊಂದು ಹೊಸ ಇವಿ ಬಡುಗಡೆ ಕಾಣುತ್ತಿರುವ ಭಾರತೀಯ ಇವಿ ಮಾರುಕಟ್ಟೆಯಲ್ಲಿ ತನ್ನ ಡ್ಯಾಕ್ಸ್ ಇ ಹಾಗೂ ಜ಼ೂಮರ್‌ ಇಗಳಿಗೆಂದು ಪೇಟೆಂಟ್ ಕೋರಿ ಅರ್ಜಿ ಸಲ್ಲಿಸಿದೆ ಹೋಂಡಾ.

ವೃತ್ತಾಕಾರ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಸಿಡಿ ಡಿಸ್ಪ್ಲೇ, ಎರಡೂ ಬದಿಗಳಲ್ಲಿ ಡಿಸ್ಕ್‌ ಬ್ರೇಕ್‌ಗಳನ್ನು ಹೊಂದಿರುವ ಈ ಮಾಡೆಲ್‌ಗಳು ಬಾಶ್ ಹಬ್ ಮೋಟರ್‌ನಿಂದ ಶಕ್ತಿ ಪಡೆಯುತ್ತಿದ್ದು, ಗಂಟೆಗೆ 25ಕಿಮೀ ಗರಿಷ್ಠ ವೇಗದಲ್ಲಿ ಚಲಿಸಬಲ್ಲವು. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಈ ಸ್ಕೂಟರ್‌ಗಳು 80ಕಿಮೀ ಚಲಿಸಬಲ್ಲವು.

ಒಂದು ವೇಳೆ ಚಾರ್ಜ್ ಖಾಲಿಯಾದರೆ ಪೆಡಲ್ ತುಳಿದುಕೊಂಡು ಹೋಗುವ ಅವಕಾಶವನ್ನು ಡ್ಯಾಕ್ಸ್ ನಿಮಗೆ ಕೊಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...