alex Certify ʼಪಟಾಕಿʼ ಶುರುವಾಗಿದ್ದರ ಇತಿಹಾಸದ ಹಿಂದಿದೆ ಕುತೂಹಲಕಾರಿ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಟಾಕಿʼ ಶುರುವಾಗಿದ್ದರ ಇತಿಹಾಸದ ಹಿಂದಿದೆ ಕುತೂಹಲಕಾರಿ ಕಥೆ

ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಸಂತೋಷವನ್ನು ಪಟಾಕಿ ಸಿಡಿಸುವ ಮೂಲಕ ವ್ಯಕ್ತಪಡಿಸ್ತಾರೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚುವವರ ಸಂಖ್ಯೆ ಹೆಚ್ಚು. ಪಟಾಕಿ ಯಾವಾಗ ಮತ್ತು ಎಲ್ಲಿಂದ ಶುರುವಾಯ್ತು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ.

ಪಟಾಕಿಗಳ ಮೂಲದ ಬಗ್ಗೆ ಅನೇಕ ಪ್ರಸಿದ್ಧ ಕಥೆಗಳಿವೆ. ಆದ್ರೆ ಇದು ಆರನೇ ಶತಮಾನದಲ್ಲಿ ಚೀನಾದಲ್ಲಿ ಪ್ರಾರಂಭವಾಯಿತು ಎನ್ನಲಾಗುತ್ತದೆ. ಪಟಾಕಿ ಬಗ್ಗೆ ಆಸಕ್ತಿದಾಯಕ ಕಥೆಯಿದೆ.

ದೇಶದ ಇತಿಹಾಸದಲ್ಲೇ ಗಾಂಧೀಜಿ ಬಿಟ್ರೆ 25 ಲಕ್ಷಕ್ಕೂ ಅಧಿಕ ಮಂದಿ ಅಂತಿಮ ದರ್ಶನ ಪಡೆದ ಏಕೈಕ ವ್ಯಕ್ತಿ ಪುನೀತ್

ಅಡುಗೆ ಮಾಡುವಾಗ ತಪ್ಪಾಗಿ ಒಲೆಗೆ ಪೊಟಾಶಿಯಂ ನೈಟ್ರೇಟ್ ಎಂದು ಕರೆಯಲ್ಪಡುವ ಸಾಲ್ಟ್ ಪೀಟರ್ ಎಸೆಯಲಾಗಿತ್ತಂತೆ. ಆಗ ಬಣ್ಣದ ಜ್ವಾಲೆಗಳು ಹೊರ ಬಂದಿದ್ದವಂತೆ. ನಂತ್ರ ಅದಕ್ಕೆ ಕಲ್ಲಿದ್ದಲು ಮತ್ತು ಗಂಧಕದ ಪುಡಿಯನ್ನು ಹಾಕಲಾಯಿತಂತೆ. ಆಗ ಶಬ್ಧ ಕೇಳಿ ಬಂತಂತೆ. ಹೀಗೆ ಗನ್ ಪೌಡರ್ ಕಂಡುಹಿಡಿಯಲಾಯಿತು. ಅದನ್ನು ಪಟಾಕಿಯಾಗಿ ಬಳಸಲಾಯ್ತು ಎನ್ನಲಾಗುತ್ತದೆ.

ಕೆಲವರು, ಬಾಣಸಿಗನಲ್ಲ, ಸೈನಿಕ ಇದನ್ನು ಕಂಡು ಹಿಡಿದಿದ್ದಾನೆ ಎನ್ನುತ್ತಾರೆ. ಚೀನಾದ ಸೈನಿಕ ಬಿದಿರಿನಲ್ಲಿ ಈ ಕೋವಿಮದ್ದಿನ ಮಿಶ್ರಣವನ್ನು ತುಂಬಿ ಪಟಾಕಿಯನ್ನು ತಯಾರಿಸಿದ ಎನ್ನಲಾಗುತ್ತದೆ. ಪಂಜಾಬ್ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ರಾಜೀವ್ ಲೋಚನ್, 15 ನೇ ಶತಮಾನದಲ್ಲಿ ಭಾರತದಲ್ಲಿ ಪಟಾಕಿ ಪ್ರಾರಂಭವಾಯಿತು ಎನ್ನುತ್ತಾರೆ. ಭಾರತದ ಇತಿಹಾಸದಲ್ಲೂ ಮದುವೆಗಳಲ್ಲಿ ಪಟಾಕಿಯನ್ನು ಬಳಸಲಾಗುತ್ತಿತ್ತು. ಚೆನ್ನೈನಿಂದ ಐನೂರು ಕಿಲೋಮೀಟರ್ ದೂರದಲ್ಲಿರುವ ಶಿವಕಾಶಿಯಲ್ಲಿ ಅತಿ ಹೆಚ್ಚು ಪಟಾಕಿಗಳನ್ನು ಉತ್ಪಾದಿಸಲಾಗುತ್ತದೆ. ಆರಂಭದಲ್ಲಿ ಸಣ್ಣದಾಗಿದ್ದ ಕೇಂದ್ರ ಈಗ ದೊಡ್ಡದಾಗಿ ಬೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...