alex Certify ಹಾರ್ಲಿ-ಡೇವಿಡ್‌ಸನ್ X440 ನಿರೀಕ್ಷೆಯಲ್ಲಿರುವವರಿಗೆ ಗುಡ್‌ ನ್ಯೂಸ್:‌ ಇಲ್ಲಿದೆ ಬುಕ್ಕಿಂಗ್‌ ಸೇರಿದಂತೆ ಇತರೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ್ಲಿ-ಡೇವಿಡ್‌ಸನ್ X440 ನಿರೀಕ್ಷೆಯಲ್ಲಿರುವವರಿಗೆ ಗುಡ್‌ ನ್ಯೂಸ್:‌ ಇಲ್ಲಿದೆ ಬುಕ್ಕಿಂಗ್‌ ಸೇರಿದಂತೆ ಇತರೆ ಡಿಟೇಲ್ಸ್

 

ಮೋಟಾರ್ ಸೈಕಲ್ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಿಕಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್(Hero MotoCorp), ನವರಾತ್ರಿ ಹಬ್ಬದ ಮೊದಲ ಶುಭ ದಿನದಂದು, ಅಂದರೆ ಅಕ್ಟೋಬರ್ 15, 2023ರಂದು ತನ್ನ ಪ್ರಪ್ರಥಮ ಸಹ-ಅಭಿವೃದ್ಧಿಯ ಪ್ರೀಮಿಯಮ್ ಮೋಟಾರುಸೈಕಲ್ ಹಾರ್ಲಿ-ಡೇವಿಡ್‌ಸನ್ X440 ದ ಡೆಲಿವರಿ ಆರಂಭಿಸಲು ಸಜ್ಜಾಗಿದೆ.

ಪ್ರಸ್ತುತ ಹಾರ್ಲಿ-ಡೇವಿಡ್‌ಸನ್ X440, ಉತ್ತರಭಾರತದ ರಾಜ್ಯವಾದ ರಾಜಸ್ಥಾನದ ನೀಮ್ರಾಣಾ ಎಂಬಲ್ಲಿ ಗಾರ್ಡನ್ ಫ್ಯಾಕ್ಟರಿ ಎಂದು ಕರೆಯಲ್ಪಡುವ ಹೀರೋ ಮೋಟೋಕಾರ್ಪ್‍ನ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತಿದೆ. ಸೆಪ್ಟೆಂಬರ್ 1, 2023ರಿಂದಲೂ ಪೂರ್ವ-ಬುಕ್ ಮಾಡಿದ ಗ್ರಾಹಕರಿಗಾಗಿ ಸಂಸ್ಥೆಯು ಟೆಸ್ಟ್ ರೈಡ್‌ಗಳನ್ನು ಆಯೋಜಿಸುತ್ತಿದೆ.

ಹೊಸ ಬುಕಿಂಗ್ ವಿಂಡೋ, ಅಕ್ಟೋಬರ್ 16ರಿಂದ ತೆರೆಯಲಿದ್ದು ಗ್ರಾಹಕರು ಎಲ್ಲಾ ಹಾರ್ಲಿ-ಡೇವಿಡ್‌ಸನ್ ಡೀಲರ್‌ಶಿಪ್‌ಗಳು ಮತ್ತು ದೇಶಾದ್ಯಂತ ಇರುವ ಆಯ್ದ ಹೀರೋ ಮೋಟೋಕಾರ್ಪ್ ಔಟ್‍ಲೆಟ್‍ಗಳಲ್ಲಿ ಹೊಸ ಹಾರ್ಲಿ-ಡೇವಿಡ್‌ಸನ್ X440 ಅನ್ನು ಬುಕ್ ಮಾಡಬಹುದು. ಗ್ರಾಹಕರು, www.Harley-Davidsonx440.comಗೆ ಭೇಟಿ ನೀಡುವ ಮೂಲಕ ಕೂಡ ಮೋಟಾರುಸೈಕಲನ್ನು ಅನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

ಹೀರೋ ಮೋಟೋಕಾರ್ಪ್‌ನ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್(ಸಿಇಒ) ನಿರಂಜನ್ ಗುಪ್ತ, “ಹಾರ್ಲಿ-ಡೇವಿಡ್‌ಸನ್ X440 ನಮ್ಮ ನೀಮ್ರಾಣಾ ಘಟಕದಲ್ಲಿ ಉತ್ಪಾದನೆಯು ಪೂರ್ಣಪ್ರಮಾಣದಲ್ಲಿದ್ದು ಅಪಾರ ಸಂಖ್ಯೆಯ ನಮ್ಮ ಪೂರ್ವ-ಬುಕ್ ಮಾಡಿದ ಗ್ರಾಹಕರು ಮೋಟಾರುಸೈಕಲನ್ನು ಟೆಸ್ಟ್ ರೈಡ್(ಪರೀಕ್ಷಾ ಸವಾರಿ) ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ನವರಾತ್ರಿಯ ಮೊದಲ ದಿನದಿಂದಲೇ ನಮ್ಮ ಗ್ರಾಹಕರಿಗೆ ಹಾರ್ಲಿ-ಡೇವಿಡ್‌ಸನ್ X440ಯ ಡೆಲಿವರಿಗಳನ್ನು ಆರಂಭಿಸುವ ಮೂಲಕ ಹಬ್ಬದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲು ನಾವು ಸಜ್ಜಾಗಿದ್ದೇವೆ. ಪ್ರೀಮಿಯಮ್ ಪಯಣವನ್ನು ಗೆಲ್ಲುವೆಡೆಗಿನ ಆರಂಭವಷ್ಟೇ ಇದು.”ಎಂದು ಹೇಳಿದರು.

ಜುಲೈ 2023ರಲ್ಲಿ ಅನಾವರಣಗೊಂಡಾಗಿನಿಂದಲೂ ಹಾರ್ಲಿ-ಡೇವಿಡ್‌ಸನ್ X440 ಭಾರತದಾದ್ಯಂತ ಪ್ರೀಮಿಯಮ್ ವರ್ಗದ ಗ್ರಾಹಕರನ್ನು ಸೆರೆಹಿಡಿದಿಡುವ ಮೂಲಕ ತನ್ನ ಪ್ರದರ್ಶನದ ಕೇವಲ ಒಂದು ತಿಂಗಳೊಳಗೆ 25,000ಕ್ಕಿಂತ ಹೆಚ್ಚಿನ ಬುಕಿಂಗ್ ಪಡೆದುಕೊಂಡಿದೆ. ಮೊದಲ ಸೆಟ್‌ನ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಸಲುವಾಗಿ ಹೀರೋ ಮೋಟೋಕಾರ್ಪ್ ತಾತ್ಕಾಲಿಕವಾಗಿ ಆನ್‌ಲೈನ್ ಬುಕಿಂಗ್ ವಿಂಡೋವನ್ನು ಮುಚ್ಚಬೇಕಾಯಿತು.

ಮೋಟಾರುಸೈಕಲ್ ಮೂರು ವೈವಿಧ್ಯಗಳಲ್ಲಿ ಲಭ್ಯವಿದೆ – ಡೆನಿಮ್(Denim), ವಿವಿಡ್(Vivid) ಮತ್ತು ಎಸ್(S). ಕ್ರಮವಾಗಿ ಇವುಗಳ ಬೆಲೆ ರೂ. 2,39,500/- (ಡೆನಿಮ್), ರೂ. 2,59,500/- (ವಿವಿಡ್) ಮತ್ತು ರೂ. 2,79,500/- (ಎಸ್) ಆಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...