alex Certify ರಾಬರ್ಟ್ ಡೌನಿ ಜೂನಿಯರ್‌ ಜಗಿದ ಚ್ಯೂಯಿಂಗ್ ​ಗಮ್​ ಹರಾಜಿಗೆ: ತಲೆ ತಿರುಗಿಸುತ್ತೆ ಆರಂಭಿಕ ಬೆಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಬರ್ಟ್ ಡೌನಿ ಜೂನಿಯರ್‌ ಜಗಿದ ಚ್ಯೂಯಿಂಗ್ ​ಗಮ್​ ಹರಾಜಿಗೆ: ತಲೆ ತಿರುಗಿಸುತ್ತೆ ಆರಂಭಿಕ ಬೆಲೆ….!

ʼಐರನ್ ಮ್ಯಾನ್ʼ ಖ್ಯಾತಿಯ ರಾಬರ್ಟ್ ಡೌನಿ ಜೂನಿಯರ್‌ ಅವರು ಅಗಿದಿದ್ದ ಚ್ಯೂಯಿಂಗ್​ ಗಮ್​ ಅನ್ನು ಹರಾಜಿಗೆ ಇಡಲಾಗಿದೆ.

ಯಾರಾದರೂ ಅಗಿದಿರುವ ಚ್ಯೂಯಿಂಗ್​ ಗಮ್​ ಹೀಗೆ ಮಾರಾಟಕ್ಕಾ ಎಂದು ಮೂಗು ಮುರಿಯಬೇಡಿ. ಸೆಲೆಬ್ರಿಟಿಗಳು ಬಳಸಿರುವ ಬಟ್ಟೆಗಳನ್ನು ಖರೀದಿಸಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ರಾಬರ್ಟ್ ಡೌನಿ ಜೂನಿಯರ್‌ ಜಗಿದಿರುವ ಚ್ಯೂಯಿಂಗ್​ ಗಮ್​ ಖರೀದಿಸಲು ಜನರು ಮುಗಿ ಬೀಳುತ್ತಿದ್ದಾರೆ.

ಒಂದು ವೇಳೆ ನಿಮಗೆ ಇದನ್ನು ಖರೀದಿಸುವ ಆಸೆ ಇದ್ದರೆ ಈ ಬಿಡ್​ನಲ್ಲಿ ನೀವು 40,147 ಅಮೆರಿಕನ್​ ಡಾಲರ್​ ಇಡಬೇಕು. ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ ಅಂದಾಜು 32 ಲಕ್ಷ ರೂಪಾಯಿ !

ಕಳೆದ ತಿಂಗಳು ಆಯೋಜಿಸಲಾದ ಜಾನ್ ಫಾವ್ರೊ ಅವರ ಹಾಲಿವುಡ್ ವಾಕ್ ಆಫ್ ಫೇಮ್ ಸಮಾರಂಭದಲ್ಲಿ ರಾಬರ್ಟ್ ಡೌನಿ ಜೂನಿಯರ್ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಈ ಚ್ಯೂಯಿಂಗ್ ಗಮ್ ಜಗಿದಿದ್ದು ಅದನ್ನು ಸಂಗ್ರಹಿಸಿ ಇಡಲಾಗಿದೆ.

ಇದೀಗ ಬಿಡ್ಡಿಂಗ್‌ಗಾಗಿ ಪಟ್ಟಿ ಮಾಡಲಾಗಿದ್ದು, ಇದರ ಮೊತ್ತ ರೂ. 32 ಲಕ್ಷದಿಂದ ಆರಂಭವಾಗಲಿದೆ. ಬಿಡ್ಡಿಂಗ್ ಏಪ್ರಿಲ್ 1 ರ ಶನಿವಾರದಂದು ಕೊನೆಗೊಳ್ಳಲಿದೆ. ಅತಿ ಹೆಚ್ಚು ಬಿಡ್ ಮಾಡಿದವರಿಗೆ ಇದನ್ನು ನೀಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...