alex Certify ಹೊಸ ಗೆಳೆಯನನ್ನು ಹುಡುಕಿಕೊಂಡ ಹೃತಿಕ್‌ ರೋಷನ್‌ ಮಾಜಿ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಗೆಳೆಯನನ್ನು ಹುಡುಕಿಕೊಂಡ ಹೃತಿಕ್‌ ರೋಷನ್‌ ಮಾಜಿ ಪತ್ನಿ

ಬಾಲಿವುಡ್​ ನಟ ಹೃತಿಕ್​ ರೋಷನ್​ ಮಾಜಿ ಪತ್ನಿ ಸುಸೇನ್​ ಖಾನ್​ ಇಂದು ತಮ್ಮ 43ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಹಾಗೂ ಸುಸೇನ್​​ ಖಾನ್​ರ ಬಾಯ್​ಫ್ರೆಂಡ್​ ಕೂಡ ಎನ್ನಲಾದ ಆರ್ಸ್ಲಾನ್ ಗೋನಿ ನಟಿಯ ಜನ್ಮದಿನವನ್ನು ಸೋಶಿಯಲ್​ ಮೀಡಿಯಾದಲ್ಲಿ ಇನ್ನಷ್ಟು ಸ್ಪೆಷಲ್​ ಮಾಡಿದ್ದಾರೆ.

ಬರ್ತಡೇ ಗರ್ಲ್​ ಸುಸೇನ್​ ಖಾನ್​ ಜೊತೆಗಿನ ಫೋಟೋ ಶೇರ್​ ಮಾಡಿರುವ ಆರ್ಸ್ಲಾನ್ ಸುಸೇನ್​​ರಿಗಾಗಿ ಕೆಲ ಸಾಲುಗಳನ್ನು ಬರೆದಿದ್ದಾರೆ. ʼನನ್ನ ಡಾರ್ಲಿಂಗ್​​ಗೆ ಜನ್ಮ ದಿನದ ಶುಭಾಶಯಗಳು. ನಿನಗೆ ಅತ್ಯಂತ ಶ್ರೇಷ್ಟವಾದ ಹಾಗೂ ಮನೋಹರವಾದ ದಿನಗಳು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆʼ ಎಂದು ಶೀರ್ಷಿಕೆ ನೀಡಿದ್ದಾರೆ.

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಮೊದಲು ನಿಮಗಿದು ತಿಳಿದಿರಲಿ

ಸುಸೇನ್​ ಖಾನ್​ ಹಾಗೂ ಆರ್ಸ್ಲಾನ್ ಗೋನಿ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವಿಚಾರ ಗುಟ್ಟಾಗೇನು ಉಳಿದಿಲ್ಲ. ಆದರೆ ತಮ್ಮ ಸಂಬಂಧದ ಬಗ್ಗೆ ಇವರಿಬ್ಬರೂ ಈವರೆಗೆ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.

ಗೋನಿ ಜನ್ಮ ದಿನದ ಶುಭಾಶಯಕ್ಕೆ ಪ್ರತಿಕ್ರಿಯೆ ನೀಡಿದ ಸುಸೇನ್​ ; ಧನ್ಯವಾದಗಳು, ಧನ್ಯವಾದಗಳು ಹಾಗೂ ನನ್ನ ಎಲ್ಲವೂ ಆಗಿರುವ ನಿನಗೆ ಧನ್ಯವಾದಗಳು ಎಂದು ಕಮೆಂಟ್​ ಮಾಡಿದ್ದಾರೆ.

ಅಕ್ಟೋಬರ್ 28ರಂದು ‘ಪುಷ್ಪ’ ಸಿನಿಮಾದ ಮೂರನೇ ಹಾಡು ರಿಲೀಸ್

ಸುಸೇನ್​ ಖಾನ್​ ಹಾಗೂ ಹೃತಿಕ್ ರೋಷನ್​​ 2000ದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹಾಗೂ 2014 ರಲ್ಲಿ ವಿಚ್ಛೇದನ ಘೋಷಿಸಿದ್ದರು. ಸುಸೇನ್​ ಹಾಗೂ ಹೃತಿಕ್​​ಗೆ ಇಬ್ಬರು ಮಕ್ಕಳು ಸಹ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...