alex Certify ʼವಿಕ್ರಂ ವೇದʼ ಚಿತ್ರಕ್ಕಾಗಿ ಹೃತಿಕ್‌ ಪಡೆದಿದ್ದಾರೆ ಇಷ್ಟು ಸಂಭಾವನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಕ್ರಂ ವೇದʼ ಚಿತ್ರಕ್ಕಾಗಿ ಹೃತಿಕ್‌ ಪಡೆದಿದ್ದಾರೆ ಇಷ್ಟು ಸಂಭಾವನೆ…!

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ ಚಿತ್ರದ ಯಶಸ್ಸಿನ ನಂತರ, ಇದೀಗ ಚಿತ್ರಪ್ರೇಮಿಗಳು ಕಳೆದ ಶುಕ್ರವಾರ ಬಿಡುಗಡೆಯಾದ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅವರ ‘ವಿಕ್ರಮ್ ವೇದ’ ಸಿನೆಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಕೊಂಡಿದ್ದಾರೆ.

ಹೃತಿಕ್‌ ಹಾಗೂ ಸೈಫ್‌ರಂತಹ ಜನಪ್ರಿಯ ನಟರನ್ನು ಒಳಗೊಂಡಿರೋ ವಿಕ್ರಮ್‌ ವೇದ ಚಿತ್ರ ಸಪ್ಟೆಂಬರ್‌ 30ರಂದೇ ರಿಲೀಸ್‌ ಆಗಿದೆ. ಈ ಚಿತ್ರ ನಿರ್ಮಾಣಕ್ಕೆ ಬರೋಬ್ಬರಿ 175 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಹೃತಿಕ್ ಮತ್ತು ಸೈಫ್ ಜೊತೆಗೆ ಚಿತ್ರದಲ್ಲಿ ರಾಧಿಕಾ ಆಪ್ಟೆ, ರೋಹಿತ್ ಸರಾಫ್, ಶರೀಬ್ ಹಶ್ಮಿ ಮತ್ತು ಯೋಗಿತಾ ಬಿಹಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಿಗ್‌ ಬಜೆಟ್‌ ಚಿತ್ರ ಈಗಾಗ್ಲೇ ಎಲ್ಲರ ಗಮನ ಸೆಳೆದಿದೆ. ಈ ತಾರೆಯರು ಎಷ್ಟೆಷ್ಟು ಕೋಟಿ ಸಂಭಾವನೆ ಪಡೆದಿದ್ದಾರೆ ಅನ್ನೋದು ಗೊತ್ತಾದ್ರೆ ಎಲ್ಲರೂ ಆಶ್ಚರ್ಯ ಪಡೋದ್ರಲ್ಲಿ ಅನುಮಾನವೇ ಇಲ್ಲ. ಹೃತಿಕ್ ರೋಷನ್ 2019 ರಲ್ಲಿ ‘ವಾರ್’ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಮತ್ಯಾವುದೇ ಸಿನೆಮಾದಲ್ಲಿ ನಟಿಸಿರಲಿಲ್ಲ. ‘ವಿಕ್ರಮ್ ವೇದ’ ಚಿತ್ರದ ಮೂಲಕ ಕಮ್‌ ಬ್ಯಾಕ್‌ ಮಾಡಿರೋ ಹೃತಿಕ್‌ಗೆ ತಮ್ಮ ಪಾತ್ರಕ್ಕಾಗಿ 50 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ.

‘ವಿಕ್ರಂ ವೇದ’ ಚಿತ್ರದಲ್ಲಿ ಸೈಫ್ ಅಲಿ ಖಾನ್ ಇನ್ಸ್‌ಪೆಕ್ಟರ್ ವಿಕ್ರಮ್ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಕೂಡ 12 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ನೆಟ್‌ಫ್ಲಿಕ್ಸ್‌ನ ‘ಸೇಕ್ರೆಡ್ ಗೇಮ್ಸ್’ ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ರಾಧಿಕಾ ಆಪ್ಟೆ ಮತ್ತು ಸೈಫ್ ಅಲಿ ಖಾನ್, ಈ ಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದಾರೆ. ರಾಧಿಕಾಗೆ 3 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಅಂತಾ ಹೇಳಲಾಗ್ತಿದೆ.

ಇನ್ನು ಕ್ಯೂಟ್‌ ಕ್ಯೂಟ್‌ ಆಗಿರೋ ನಟ ರೋಹಿತ್ ಸರಾಫ್‌ಗೆ  ಸಾಕಷ್ಟು ಅಭಿಮಾನಗಳಿದ್ದಾರೆ. ‘ದಿ ಸ್ಕೈ ಈಸ್ ಪಿಂಕ್’, ‘ಡಿಯರ್ ಜಿಂದಗಿ’, ‘ಲುಡೋ’ ಮತ್ತು ‘ಮಿಸ್‌ಮ್ಯಾಚ್ಡ್‌ʼ ಚಿತ್ರಗಳಲ್ಲಿ ರೋಹಿತ್‌ ಪ್ರೇಕ್ಷಕರಿಗೆ ಇಷ್ಟವಾಗಿದ್ದರು, ವಿಕ್ರಮ್‌ ವೇದದಲ್ಲಿ ಹೃತಿಕ್‌ ತಮ್ಮನ ಪಾತ್ರದಲ್ಲಿ ನಟಿಸಿರೋ ರೋಹಿತ್‌ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ನಟ ಷರೀಬ್ ಹಶ್ಮಿಗೆ 50 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...