alex Certify ‘ಟೋಲ್’ ನ ಮಹಿಳಾ ಸಿಬ್ಬಂದಿ ಮೇಲೆ ಅಮಾನುಷ ಹಲ್ಲೆ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಟೋಲ್’ ನ ಮಹಿಳಾ ಸಿಬ್ಬಂದಿ ಮೇಲೆ ಅಮಾನುಷ ಹಲ್ಲೆ: ವಿಡಿಯೋ ವೈರಲ್​

ದೇಶಾದ್ಯಂತ ಟೋಲ್​ ಪ್ಲಾಜಾಗಳಲ್ಲಿ ಹಿಂಸಾಚಾರ ನಡೆಯುವ ಸಾಕಷ್ಟು ಆತಂಕಕಾರಿ ಘಟನೆಗಳು ದಿನದಿಂದ ದಿನಕ್ಕೆ ವರದಿಯಾಗುತ್ತಲೇ ಇರುತ್ತದೆ. ಇದೀಗ ಗ್ರೇಟರ್​ ನೋಯ್ಡಾದ ಟೋಲ್​ ಪ್ಲಾಜಾದಲ್ಲಿಯೂ ಇಂತದ್ದೇ ಒಂದು ಘಟನೆ ಸಂಭವಿಸಿದೆ. ಮಹಿಳೆಯೊಬ್ಬರು ಟೋಲ್​ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಅವಮಾನಿಸಿದ್ದು ಈ ವಿಡಿಯೋ ಇದೀಗ ವೈರಲ್​ ಆಗಿದೆ.

ಮಹಿಳೆಯೊಬ್ಬರು ಟೋಲ್​ ಬೂತ್​​ಗೆ ಪ್ರವೇಶಿಸುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಟೋಲ್​ ರೂಮ್​ಗೆ ಎಂಟ್ರಿ ಕೊಟ್ಟ ಮಹಿಳೆಯು, ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾಳೆ. ಇದಾದ ಬಳಿಕ ಮಹಿಳಾ ಸಿಬ್ಬಂದಿಯ ಕಿವಿಯನ್ನು ಎಳೆದಿದ್ದು ಮಾತ್ರವಲ್ಲದೇ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾಳೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡಿದ್ದು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಧಿಕಾರಿಗಳು ಮಹಿಳೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಗ್ರೇಟರ್​ ನೋಯ್ಡಾದ ದಾದ್ರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು ಆರೋಪಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.

— ShoneeKapoor (@ShoneeKapoor) July 17, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...