alex Certify ಪ್ರೀತಿಸಿದವನಿಗಾಗಿ ಭಾರತಕ್ಕೆ ಓಡಿ ಬಂದಿದ್ದ ಸೀಮಾ ಹೈದರ್ ಡ್ಯಾನ್ಸ್​ ವಿಡಿಯೋ ವೈರಲ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿದವನಿಗಾಗಿ ಭಾರತಕ್ಕೆ ಓಡಿ ಬಂದಿದ್ದ ಸೀಮಾ ಹೈದರ್ ಡ್ಯಾನ್ಸ್​ ವಿಡಿಯೋ ವೈರಲ್​…!

ಪ್ರೀತಿಗಾಗಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತದ ಗ್ರೇಟರ್​ ನೋಯ್ಡಾಗೆ ಪ್ರವೇಶಿಸಿ ಸಚಿನ್​ ಮೀನಾ ಜೊತೆಯಲ್ಲಿ ನೆಲೆಸಿರುವ ಸೀಮಾ ಹೈದರ್​ ಪ್ರತಿ ದಿನಕ್ಕೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ.

ಇದೀಗ ಪಾಕಿಸ್ತಾನದ ಈ ಮಹಿಳೆಯು ಹೊಸ ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದು ಸೀಮಾ ಹೈದರ್​​​ ನೃತ್ಯ ಇದೀಗ ಟಾಕ್​ ಆಫ್​ ದಿ ಟೌನ್​ ಆಗಿದೆ.

ಸೀಮಾ ಹೈದರ್​​​ ಹಳೆಯ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ತುಂಬಿ ತುಳುಕುತ್ತಿದೆ. ಆದರೆ ಈ ಹೊಸ ವಿಡಿಯೋದಲ್ಲಿ ಸೀಮಾ ಹೈದರ್​ ಭಾರತೀಯ ಸಿನಿಮಾದ ಹಾಡೊಂದಕ್ಕೆ ನೃತ್ಯ ಮಾಡಿದ್ದಾರೆ. ಅಂಕಿತಾ ರಾಥೋಡ್​ ಎಂಬ ಟ್ವಿಟರ್​ ಖಾತೆಯಿಂದ ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ.

ಇನ್ನು ಈ ಎಲ್ಲದರ ನಡುವೆ ಪಾಕಿಸ್ತಾನ ಮೂಲದ ಸೀಮಾ ಹೈದರ್​​ನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ವಶಕ್ಕೆ ಪಡೆದು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್​ಐ ಜೊತೆಗಿನ ಶಂಕಿತ ಸಂಬಂಧಗಳ ಬಗ್ಗೆ ಪ್ರಶ್ನೆ ಮಾಡಿದೆ. ಸೀಮಾ ಹೈದರ್​ ಜೊತೆಯಲ್ಲಿ ಸಚಿನ್​ ಮೀನಾರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇವರಿಬ್ಬರನ್ನು ಗ್ರೇಟರ್​ ನೋಯ್ಡಾದ ರಬುಪುರ ಪ್ರದೇಶದಲ್ಲಿರುವ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಜೆಯವರೆಗೂ ವಿಚಾರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...