alex Certify ದಹಿಸುತ್ತಿದ್ದ ಕಾರಿನೊಳಗಿದ್ದ ವೃದ್ಧ ದಂಪತಿಯನ್ನು ರಕ್ಷಿಸಿದ ಜನತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಹಿಸುತ್ತಿದ್ದ ಕಾರಿನೊಳಗಿದ್ದ ವೃದ್ಧ ದಂಪತಿಯನ್ನು ರಕ್ಷಿಸಿದ ಜನತೆ

ಕ್ಯಾಲಿಫೋರ್ನಿಯಾದ ಈಸ್ಟ್​ ಕೌಂಟಿ ಸ್ಯಾನ್​ ಡಿಯಾಗೋದಲ್ಲಿ ದಹಿಸುತ್ತಿರುವ ವಾಹನದಿಂದ ವೃದ್ಧ ದಂಪತಿಯನ್ನು ರಕ್ಷಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆಯ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ವೃದ್ಧ ದಂಪತಿಯನ್ನು ಕಾಪಾಡಿದ ಜನತೆಗೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

ಕಾರಿನಲ್ಲಿ ಬೆಂಕಿ ಇರುವುದನ್ನು ಗಮನಿಸಿದ ಜನರ ಗುಂಪು ರಕ್ಷಣೆಗೆ ಧಾವಿಸಿದ ವೇಳೆ ಕಾರಿನೊಳಗೆ 90ರ ಆಸುಪಾಸಿನ ದಂಪತಿ ಇರುವುದು ಗಮನಕ್ಕೆ ಬಂದಿದೆ. ರಕ್ಷಣಾ ಕಾರ್ಯಾಚರಣೆಯ ಸಂಪೂರ್ಣ ದೃಶ್ಯಾವಳಿಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಒಂದಷ್ಟು ಮಂದಿ ಕಾರಿನೊಳಗಿದ್ದ ದಂಪತಿಯನ್ನು ಎಳೆಯುತ್ತಿರುವುದನ್ನು ಕಾಣಬಹುದಾಗಿದೆ. ಇದೇ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದ ಮೇರಿ ಮಾರ್ಕೋರಿ ಎಂಬವರು ಈ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...