alex Certify ನೀರಿನಲ್ಲಿ ಫೈಟಿಂಗ್​ ಮಾಡಿದ ವೃದ್ಧ ದಂಪತಿ: ಮುದ್ದು, ಮುದ್ದು ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನಲ್ಲಿ ಫೈಟಿಂಗ್​ ಮಾಡಿದ ವೃದ್ಧ ದಂಪತಿ: ಮುದ್ದು, ಮುದ್ದು ಎಂದ ನೆಟ್ಟಿಗರು

ಸಂಬಂಧ ಎಷ್ಟೇ ಗಾಢವಾಗಿದ್ದರೂ ಸಹ ಹಲವು ಸಮಯಗಳು ಕಳೆದ ಬಳಿಕ ಅದರ ತೀವ್ರತೆ, ಆ ಸಂಬಂಧದ ಮೇಲಿನ ಆಕರ್ಷಣೆ ಕಡಿಮೆಯಾಗುತ್ತದೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವೃದ್ಧ ದಂಪತಿಯ ಜೀವನದಲ್ಲಿ ಈ ಮಾತು ಅಕ್ಷರಶಃ ಸುಳ್ಳಾಗಿದೆ. ವೃದ್ಧ ದಂಪತಿ ಗಿಡಗಳಿಗೆ ನೀರುಣಿಸುವ ಸಂದರ್ಭದಲ್ಲಿ ಮೋಜು ಮಸ್ತಿ ಮಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಂದಹಾಗೆ ಈ ವಿಡಿಯೋ 1.7 ಮಿಲಿಯನ್​ಗೂ ಅಧಿಕ ವೀವ್ಸ್​ ಸಂಪಾದಿಸಿದೆ.

ಗಿಡಕ್ಕೆ ನೀರುಣಿಸುವ ಸಂದರ್ಭದಲ್ಲಿ ಪತಿಯು ಪತ್ನಿಗೆ ಪೈಪ್​ನಿಂದ ನೀರು ಹಾಕಿದರೆ. ಪತ್ನಿಯು ಬಕೆಟ್​ನಲ್ಲಿದ್ದ ನೀರನ್ನೇ ಗಂಡನ ಕಡೆಗೆ ಹಾಕಿದ್ದಾಳೆ. ಈ ಮುದ್ದಾದ ಕ್ಷಣವನ್ನು ದೂರದಿಂದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದು ಅದನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಈ ಜಲಯುದ್ಧವನ್ನ ಮೊದಲು ಪತಿ ಆರಂಭಿಸಿದ್ರು, ಆಕೆಯು ನೈಸರ್ಗಿಕವಾಗಿಯೇ ತನ್ನನ್ನು ತಾನು ಬಚಾವ್​ ಮಾಡಿಕೊಂಡಿದ್ದಾರೆ. ನಿಮ್ಮನ್ನು ನೀವು ಎಂದಿಗೂ ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಡಿ ಅಂತಾ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...