alex Certify ಜನಸಾಮಾನ್ಯರಿಗೆ ಗುಡ್ ನ್ಯೂಸ್ : ಟೊಮೆಟೊ ಬೆಲೆಯಲ್ಲಿ ತುಸು ಇಳಿಕೆ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಗುಡ್ ನ್ಯೂಸ್ : ಟೊಮೆಟೊ ಬೆಲೆಯಲ್ಲಿ ತುಸು ಇಳಿಕೆ!

ಕೋಲಾರ : ಟೊಮೆಟೊ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಟೊಮೆಟೊ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.15 ಕೆಜಿ ಟೊಮೆಟೊ ಬಾಕ್ಸ್ ಇಂದು 1,500 ರೂ.ನಿಂದ 1,700 ರೂ.ವರೆಗೆ ಮಾರಾಟವಾಗಿದೆ.

ಹೌದು, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಜನಸಾಮಾನ್ಯರಿಗೆ ರಿಲೀಫ್ ಸಿಕ್ಕಂತಾಗಿದೆ. 15 ಕೆಜಿ ಟೊಮೆಟೊ ಬಾಕ್ಸ್ ಬೆಲೆ ಕಳೆದ ನಾಲ್ಕು ದಿನಗಳಿಂದ 1,000 ರೂ.ವರೆಗೆ ಇಳಿಕೆಯಾಗಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ 2,700 ರೂ.ನಿಂದ 1,500 ರೂ.ಗೆ ಕುಸಿದಿದೆ.ಕಳೆದ ನಾಲ್ಕು ದಿನಗಳಿಂದ ಅಂದಾಜು 1,000 ರೂ.ಕುಸಿತವಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬೇರೆ ರಾಜ್ಯಗಳಿಂದ ಟೊಮೆಟೊ ಬಂದಿರುವ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಿದೆ. ಇಂದು 15 ಕೆಜಿ ಟೊಮೆಟೊ ಬಾಕ್ಸ್ ಬೆಲೆ 1,500 ರೂ.ನಿಂದ 1,700 ರೂ.ವರೆಗೆ ಮಾರಾಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...