alex Certify 2022 ರಲ್ಲೂ ಚಿಪ್‌ ಕೊರತೆ ಮುಂದುವರಿಕೆ: ವರದಿಯಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2022 ರಲ್ಲೂ ಚಿಪ್‌ ಕೊರತೆ ಮುಂದುವರಿಕೆ: ವರದಿಯಲ್ಲಿ ಬಹಿರಂಗ

ಕೋವಿಡ್ -19 ಸಾಂಕ್ರಾಮಿಕವು ಸಿಲಿಕಾನ್ ಉದ್ಯಮದ ಮೇಲೆ ಪರಿಣಾಮ ಬೀರಿದ್ದು ಜಾಗತಿಕ ಚಿಪ್ ಕೊರತೆಯನ್ನು ಉಂಟುಮಾಡಿದೆ ಎಂಬುದು ಹೊಸ ಸುದ್ದಿಯೇನಲ್ಲ.

ಈ ಜಾಗತಿಕ ಚಿಪ್ ಕೊರತೆಯ ಪರಿಣಾಮವು ಸ್ಮಾರ್ಟ್‌ಫೋನ್ ತಯಾರಿಕೆ ಮತ್ತು ವಾಹನ ಉದ್ಯಮಗಳು ಸೇರಿದಂತೆ ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿದೆ. ಹೊಸ ವರದಿಯೊಂದರ ಪ್ರಕಾರ ಚಿಪ್ ಕೊರತೆಯು 2022ರ ಉದ್ದಕ್ಕೂ ಮುಂದುವರಿಯುವ ನಿರೀಕ್ಷೆಯಿದೆ.

ನಿಮಗೆ ತಿಳಿದಿರಲಿ ಕೋವಿಡ್ ಹಾಗೂ ಸಾಮಾನ್ಯ ಶೀತದ ನಡುವಿನ ವ್ಯತ್ಯಾಸ

ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್ ವರದಿಯ ಪ್ರಕಾರ, ಜಾಗತಿಕ ಚಿಪ್ ಕೊರತೆಯು ಸದ್ಯಕ್ಕೆ ಕೊನೆಗೊಳ್ಳುವುದಿಲ್ಲ ಮತ್ತು ಈ ಸಂಬಂಧದ ಸಮಸ್ಯೆಯು ಅವುಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿದೆ. ವರದಿಯ ಪ್ರಕಾರ, ಸ್ಮಾರ್ಟ್‌ಫೋನ್ ತಯಾರಕರು, ಕಾರು ತಯಾರಕರು ಮತ್ತು ವೈದ್ಯಕೀಯ ಸಾಧನ ತಯಾರಕರು ಹೊಂದಿರುವ ಚಿಪ್‌ಗಳ ಸರಾಸರಿ ದಾಸ್ತಾನು 2019ರಲ್ಲಿ 40 ದಿನಗಳಿದ್ದರೆ ಅದು 2021ರಲ್ಲಿ ಐದು ದಿನಗಳಿಗಿಂತ ಕಡಿಮೆಯಾಗಿದೆ.

“ಕೋವಿಡ್‌-19 ಅಪ್ಪಳಿಸಿದ್ದು, ನೈಸರ್ಗಿಕ ವಿಪತ್ತು ಅಥವಾ ರಾಜಕೀಯ ಅಸ್ಥಿರತೆಗಳ ಕಾರಣದಿಂದ ವಿದೇಶಿ ಸೆಮಿಕಂಡಕ್ಟರ್ ಸೌಲಭ್ಯವು ಕೆಲವೇ ವಾರಗಳವರೆಗೆ ಸಮರ್ಪಕವಾಗಿ ಕೆಲಸ ಮಾಡದೇ ಇದ್ದರೆ, ಅಮೆರಿದಲ್ಲಿರುವ ಉತ್ಪಾದನಾ ಸೌಲಭ್ಯವೊಂದನ್ನು ಬಂದ್ ಮಾಡುವ ಸಾಧ್ಯತೆ ಹೊಂದಿದೆ,” ಎಂದು ವರದಿ ಹೇಳುತ್ತದೆ.

ಇನ್ನು, ಅರೆವಾಹಕಗಳ (ಸೆಮಿ ಕಂಡಕ್ಟರ್‌ಗಳ) ಬೇಡಿಕೆಯು 2019 ರಲ್ಲಿದ್ದಕ್ಕಿಂತ 2021ರಲ್ಲಿ 17% ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ. ಇದಲ್ಲದೆ, ಈ ವಿಚಾರದ ಸಮಸ್ಯೆಗಳು ವಾಹನಗಳು, ವೈದ್ಯಕೀಯದಲ್ಲಿ ಬಳಸುವ ಲೆಗಸಿ ಲಾಜಿಕ್ ಚಿಪ್‌ಗಳು ಸೇರಿದಂತೆ ನಿರ್ದಿಷ್ಟ ಸೆಮಿಕಂಡಕ್ಟರ್ ಇನ್‌ಪುಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಅಡಚಣೆಗಳು ಹೆಚ್ಚು ಕೇಂದ್ರೀಕೃತವಾಗಿವೆ ಎಂದು ವರದಿ ಹೇಳುತ್ತದೆ. ಇನ್ನು ಅನಲಾಗ್ ಚಿಪ್‌ಗಳನ್ನು ಬಳಸಲಾಗುವ ವಿದ್ಯುತ್‌ ನಿರ್ವಹಣೆ, ಇಮೇಜ್ ಸಂವೇದಕಗಳು ಮತ್ತು ರೇಡಿಯೋ ಆವರ್ತನ, ಮತ್ತು ಸಂವೇದಕಗಳು ಮತ್ತು ಸ್ವಿಚ್‌ಗಳನ್ನು ಒಳಗೊಂಡಿರುವ ಆಪ್ಟೋ ಎಲೆಕ್ಟ್ರಾನಿಕ್ಸ್ ಚಿಪ್‌ಗಳು ಸಹ ಈ ಬೆಳವಣಿಗೆಯಿಂದ ಒತ್ತಡಕ್ಕೆ ಬಿದ್ದಿವೆ.

ಈ ಬೇಡಿಕೆಯನ್ನು ಪೂರೈಸಲು, ಹೆಚ್ಚಿನ ಅರೆವಾಹಕ ಉತ್ಪಾದನಾ ಸೌಲಭ್ಯಗಳು 90% ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರಳವಾಗಿ ಹೇಳುವುದಾದರೆ, ಹೊಸ ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯಗಳನ್ನು ನಿರ್ಮಿಸದೆ ಚಿಪ್‌ಗಳ ಉತ್ಪಾದನೆಯು ಹೆಚ್ಚಾಗುವುದಿಲ್ಲ.

ಹೆಚ್ಚುವರಿಯಾಗಿ, ಸೆಮಿಕಂಡಕ್ಟರ್ ಉತ್ಪಾದಕರು ಅರೆವಾಹಕ ಗ್ರಾಹಕರೊಂದಿಗೆ ಹೊಸ ರೀತಿಯಲ್ಲಿ ಪಾಲುದಾರಿಕೆಯನ್ನು ಹೊಂದಿದ್ದಾರೆ. ಉದಾಹರಣೆಗೆ, ಫೋರ್ಡ್ ಮತ್ತು ಗ್ಲೋಬಲ್ ಫೌಂಡ್ರೀಸ್ ಇತ್ತೀಚಿಗೆ ಭವಿಷ್ಯದ ಚಿಪ್‌ಗಳಲ್ಲಿ ಆವಿಷ್ಕರಿಸಲು ಒಟ್ಟಾಗಿ ಕೆಲಸ ಮಾಡುವ ಮಾರ್ಗಗಳನ್ನು ಗುರುತಿಸಲು ಪಾಲುದಾರಿಕೆಯನ್ನು ಘೋಷಿಸಿವೆ ಮತ್ತು ಜನರಲ್ ಮೋಟರ್ಸ್ ಕಳೆದ ವರ್ಷ ನವೆಂಬರ್‌ನಲ್ಲಿ ಸೆಮಿಕಂಡಕ್ಟರ್‌ನ ಏಳು ಭಿನ್ನ ಉತ್ಪಾದಕರೊಂದಿಗೆ ಇದೇ ರೀತಿಯ ಪಾಲುದಾರಿಕೆಯನ್ನು ಘೋಷಿಸಿತು.

ಇದಲ್ಲದೆ, ಸೆಮಿಕಂಡಕ್ಟರ್ ಉದ್ಯಮವು ಹೊಸ ಘಟಕಗಳನ್ನು ಸ್ಥಾಪಿಸಲು ಹೂಡಿಕೆಗಳನ್ನು ಹೆಚ್ಚಿಸುತ್ತಿದೆ. ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ ​​ಅರೆವಾಹಕ ಉದ್ಯಮದ ಬಂಡವಾಳ ವೆಚ್ಚವು 2021 ರಲ್ಲಿ $ 150 ಶತಕೋಟಿ ಮತ್ತು 2022 ರಲ್ಲಿ $ 150 ಶತಕೋಟಿಗೆ ತಲುಪುತ್ತದೆ ಎಂದು ವರದಿ ಮಾಡಿದೆ. ಟೆಕ್ಸಾಸ್‌ನಲ್ಲಿ $17 ಶತಕೋಟಿ ಮೌಲ್ಯದ ಸೆಮಿಕಂಡಕ್ಟರ್ ಘಟಕ ನಿರ್ಮಿಸುವುದಾಗಿ ಸ್ಯಾಮ್ಸಂಗ್ ತಿಳಿಸಿದೆ. ಆದರೆ ಇದು 2024 ರ ಅಂತ್ಯದವರೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...