alex Certify BREAKING NOW: ಬೆಲೆ ಏರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯರಿಗೆ ಮತ್ತೊಂದು ಶಾಕ್‌ – ಮತ್ತೆ ಏರಿಕೆಯಾಯ್ತು ಪೆಟ್ರೋಲ್‌ – ಡಿಸೇಲ್‌ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NOW: ಬೆಲೆ ಏರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯರಿಗೆ ಮತ್ತೊಂದು ಶಾಕ್‌ – ಮತ್ತೆ ಏರಿಕೆಯಾಯ್ತು ಪೆಟ್ರೋಲ್‌ – ಡಿಸೇಲ್‌ ಬೆಲೆ

ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇಂದು ಮತ್ತೊಂದು ಶಾಕ್.‌ ಈಗಾಗಲೇ ಗಗನಮುಖಿಯಾಗಿರುವ ಪೆಟ್ರೋಲ್‌ – ಡಿಸೇಲ್‌ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದ್ದು, ಇದರಿಂದ ದಿನಬಳಕೆ ವಸ್ತುಗಳ ಬೆಲೆ ಮತ್ತೊಮ್ಮೆ ಮುಗಿಲು ಮುಟ್ಟಲಿದೆ.

ಇಂದು ಪೆಟ್ರೋಲ್‌ – ಡಿಸೇಲ್‌ ಬೆಲೆಯಲ್ಲಿ 35 ಪೈಸೆಗಳಷ್ಟು ಏರಿಕೆಯಾಗಿದ್ದು, ಇದರಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 87.30 ರೂ. ತಲುಪಿದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 93.83 ರೂಪಾಯಿಗಳಾಗಿದೆ.

ಇನ್ನು ದೆಹಲಿಯಲ್ಲಿ ಲೀಟರ್ ಡಿಸೇಲ್‌ ಬೆಲೆ 77.48‌ ರೂಪಾಯಿಗಳಾಗಿದ್ದು, ಮುಂಬೈನಲ್ಲಿ ಲೀಟರ್‌ ಡಿಸೇಲ್‌ ಬೆಲೆ 84.36 ರೂಪಾಯಿಗಳಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 89.83 ರೂ. ಹಾಗೂ ಲೀಟರ್‌ ಡಿಸೇಲ್‌ ಬೆಲೆ 82.79 ರೂಪಾಯಿಗಳಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...