alex Certify ಅಮೆರಿಕದ ಫೇಸ್ಬುಕ್ ಬಳಕೆದಾರರು ಅತಿ ಹೆಚ್ಚು ನೋಡಿದ ಕಂಟೆಂಟ್‌ ಯಾವುದು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದ ಫೇಸ್ಬುಕ್ ಬಳಕೆದಾರರು ಅತಿ ಹೆಚ್ಚು ನೋಡಿದ ಕಂಟೆಂಟ್‌ ಯಾವುದು ಗೊತ್ತಾ….?

Facebook Reveals the Most Viewed Content in US and Results are Unexpected

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿರುವ ಸಂಬಂಧ ಅನೇಕ ಆಪಾದನೆಗಳನ್ನು ಎದುರಿಸುತ್ತಿರುವ ಫೇಸ್ಬುಕ್ ಈ ಸಂಬಂಧ ಅನೇಕ ಕಾನೂನು ಹೋರಾಟಗಳಲ್ಲಿ ನಿರತವಾಗಿದೆ. ಹಾರ್ವರ್ಡ್ ವಿವಿ ಡ್ರಾಪ್‌ಔಟ್ ಮಾರ್ಕ್ ಜ಼ುಕರ್‌ಬರ್ಗ್ ಹುಟ್ಟುಹಾಕಿದ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಳ್ಳುವ ಕಂಟೆಂಟ್‌ಗಳ ಬಗ್ಗೆ ಬಹಳ ಪ್ರಶ್ನೆಗಳು ಎದ್ದಿವೆ.

ಇದೀಗ ತನ್ನ ವೀಕ್ಷಕರಿಗೆ ಎಂಥ ಕಂಟೆಂಟ್ ತೋರಿಸುತ್ತೇನೆ ಎಂದು ಖುದ್ದು ಸ್ಪಷ್ಟನೆ ನೀಡಲು ಬಂದಿರುವ ಫೇಸ್ಬುಕ್, “ಪೇಸ್ಬುಕ್ ನ್ಯೂಸ್ ಫೀಡ್ ಮೂಲಕ ಜನರು ಏನು ನೋಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ಕೊಡುವುದೇ ನಮ್ಮ ಗುರಿಯಾಗಿದೆ. ಹಾಗೆಯೇ ಈ ತ್ರೈಮಾಸಿಕದಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಡೊಮೇನ್‌ಗಳು, ಲಿಂಕ್‌ಗಳು, ಪೇಜ್‌ಗಳು ಹಾಗೂ ಪೋಸ್ಟ್‌ಗಳ ಬಗ್ಗೆಯೂ ತಿಳಿಸುತ್ತೇವೆ” ಎಂದು ತನ್ನ ಮೊದಲ ತ್ರೈಮಾಸಿಕದ ವರದಿ ಬಿಡುಗಡೆ ವೇಳೆ ಫೇಸ್ಬುಕ್ ತಿಳಿಸಿದೆ.

ಏಪ್ರಿಲ್ 1, 2021ರಿಂದ ಜೂನ್ 30, 2021ರ ವರೆಗೆ ಅಮೆರಿಕದ ತನ್ನ ಬಳಕೆದಾರರು ಅತಿ ಹೆಚ್ಚು ವೀಕ್ಷಿಸಿದ ಸಾರ್ವಜನಿಕ ಕಂಟೆಂಟ್ ಕುರಿತಂತೆ ಫೇಸ್ಬುಕ್ ಟಾಪ್ 20 ಪೋಸ್ಟ್‌ಗಳ ಪಟ್ಟಿ ಬಿಡುಗಡೆ ಮಾಡಿದೆ.

ಮಾಸ್ಕ್ ಧರಿಸಲು ನಿರಾಕರಿಸಿದ ವ್ಯಕ್ತಿಗೆ 6 ತಿಂಗಳ ಜೈಲು ಶಿಕ್ಷೆ

ಪಟ್ಟಿಯಲ್ಲಿರುವ ಮೊದಲ ಪೋಸ್ಟ್‌ ಭಾರತದ ಮೋಟಿವೇಶನಲ್ ಸ್ಪೀಕರ್‌ ಹಾಗೂ ಇಸ್ಕಾನ್‌ನ ಸಂತ ಗೌರ್‌ ಗೋಪಾಲ್ ದಾಸ್‌ರದ್ದಾಗಿದೆ. ತನ್ನಲ್ಲಿ ಅತಿ ಹೆಚ್ಚು ವೀಕ್ಷಿಸಲಾದ ಪೋಸ್ಟ್‌ಗಳಲ್ಲಿ ಫೋಟೋ ಅಥವಾ ವಿಡಿಯೋಗಳಿವೆ ಎಂದು ಫೇಸ್ಬುಕ್ ತಿಳಿಸಿದೆ. ದಾಸ್‌ರ ಪೋಸ್ಟ್‌‌ನಲ್ಲೂ ಸಹ ವೈರಲ್ ಇಮೇಜ್ ಇತ್ತು.

“ನೀವು ನೋಡುವ ಮೊದಲ ಮೂರು ಪದಗಳು ನಿಮ್ಮ ವಾಸ್ತವ” ಎಂಬ ಕ್ಯಾಪ್ಷನ್‌ ಇದ್ದ ಚಿತ್ರವೊಂದಕ್ಕೆ 7 ದಶಲಕ್ಷ ಕಾಮೆಂಟ್‌ಗಳು, 1.1 ದಶಲಕ್ಷ ಪ್ರತಿಕ್ರಿಯೆಗಳೂ ಹಾಗೂ 3,94,000+ ಶೇರ್‌ಗಳು ದಕ್ಕಿವೆ.

ಅಧ್ಯಕ್ಷ ಜೋ ಬಿಡೆನ್‌ ಸಂದೇಶವಿದ್ದ ಪೋಸ್ಟ್‌ ಒಂದು ಆರನೇ ಸ್ಥಾನದಲ್ಲಿದೆ. “ಅಧಿಕಾರಕ್ಕೆ ಬಂದು 100 ದಿನಗಳು – ಮತ್ತು ಅಮೆರಿಕದ ಮರಳಿ ಹಳಿಗೆ ಬರುತ್ತಿದೆ” ಎಂದು ಬಿಡೆನ್ ಬರೆದಿರುವ ಈ ಪೋಸ್ಟ್‌‌ 52.8 ಮಿಲಿಯನ್ ವೀವ್ಸ್‌ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...