alex Certify ಇವಿ ಬಳಕೆಯಿಂದ ಬೆಂಗಳೂರಿನ ಗಾಳಿ ಎಷ್ಟು ಶುದ್ಧವಾಗಲಿದೆ ಗೊತ್ತಾ ? ಇಲ್ಲಿದೆ ವರದಿಯ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವಿ ಬಳಕೆಯಿಂದ ಬೆಂಗಳೂರಿನ ಗಾಳಿ ಎಷ್ಟು ಶುದ್ಧವಾಗಲಿದೆ ಗೊತ್ತಾ ? ಇಲ್ಲಿದೆ ವರದಿಯ ವಿವರ

ಹಸಿರು ಮನೆ ಅನಿಲಗಳ ಉತ್ಪಾದನೆಗೆ ಬ್ರೇಕ್ ಹಾಕುತ್ತಿರುವ ಎಲೆಕ್ಟ್ರಿಕ್ ವಾಹನಗಳು (ಇವಿ) ಜಾಗತಿಕ ಮಟ್ಟದಲ್ಲಿ ಬಹುಬೇಗ ಜನಪ್ರಿಯವಾಗಿವೆ. ಭಾರತದಂಥ ದೇಶದಲ್ಲಿ ಇವಿಗಳ ಖರೀದಿಗೆ ಉತ್ತೇಜನ ನೀಡಲು ವಿಶೇಷವಾದ ಸಬ್ಸಿಡಿಗಳನ್ನು ಸಹ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿರುವ ವಾಹನಗಳ 32% ಪಾಲನ್ನು ಇವಿಗಳು ಆವರಿಸಿದಲ್ಲಿ, ವಾರ್ಷಿಕ 33 ಲಕ್ಷ ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಗಟ್ಟಬಹುದು ಎಂದು ಸೆಂಟರ್‌ ಫಾರ್‌ ಸ್ಟಡಿ ಸೈನ್ಸ್, ಟೆಕ್ನಾಲಜಿ & ಪಾಲಿಸಿ (ಸಿಸ್ಟೆಪ್) ವರದಿಯಲ್ಲಿ ತಿಳಿದುಬಂದಿದೆ. ಇದೇ ದರದಲ್ಲಿ ಇವಿಗಳ ಪಾಲುಹೆಚ್ಚುತ್ತಾ ಹೋದಲ್ಲಿ 2030ರ ವೇಳೆಗೆ ಬೆಂಗಳೂರಿನಲ್ಲಿರುವ ವಾಹನಗಳ ಪೈಕಿ 56%ರಷ್ಟು ಇವಿಗಳೇ ಇರಲಿವೆ ಎಂದು ತಿಳಿದು ಬಂದಿದೆ.

2021 ರಲ್ಲಿ ಬೆಂಗಳೂರಿನಲ್ಲಿ 75,000 ಇವಿಗಳು ಇದ್ದವು. ಈಗಿನ ದರದಲ್ಲಿ ಇವಿಗಳ ಬಳಕೆ ಹೆಚ್ಚುತ್ತಾ ಸಾಗಿದಲ್ಲಿ, 2030ರ ವೇಳೆಗೆ ಬೆಂಗಳೂರಿನಲ್ಲಿ 56 ಪ್ರತಿಶತದಷ್ಟು ಇವಿಗಳೇ ಇರಲಿವೆ ಎಂದು ವರದಿ ತಿಳಿಸಿದೆ. ಈ ಅವಧಿಯಲ್ಲಿ ಇವಿಗಳ 20 ಲಕ್ಷ ದ್ವಿಚಕ್ರ ವಾಹನಗಳು, 1.4 ಲಕ್ಷ ನಾಲ್ಕು ಚಕ್ರ ವಾಹನಗಳು ಹಾಗೂ 1.3 ಲಕ್ಷ ತ್ರಿಚಕ್ರ ವಾಹನಗಳು ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸಲಿವೆ.

“ಇದು ಬೆಂಗಳೂರಿನ ರಸ್ತೆಗಳಿಂದ 48.5 ಲಕ್ಷದಷ್ಟು ಸಾಂಪ್ರದಾಯಿಕ ಇಂಧನದ ವಾಹನಗಳನ್ನು ಹೊರಗಿಟ್ಟಷ್ಟು ಪರಿಣಾಮಕಾರಿ,” ಎಂದು ಸಿಸ್ಟೆಪ್‌ ಸಾಮಾನ್ಯರಿಗೆ ಅರ್ಥವಾಗುವ ಅಂದಾಜು ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...