alex Certify ಭಾರತದ ಎದುರು ಪಾಕ್ ಸೋತಿದ್ದಕ್ಕೆ ಟಿವಿ ಒಡೆದು ಹಾಕಿದ ಅಭಿಮಾನಿ; ತಮಾಷೆ ಕಮೆಂಟ್ ಮಾಡಿದ ಹರ್ಭಜನ್ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಎದುರು ಪಾಕ್ ಸೋತಿದ್ದಕ್ಕೆ ಟಿವಿ ಒಡೆದು ಹಾಕಿದ ಅಭಿಮಾನಿ; ತಮಾಷೆ ಕಮೆಂಟ್ ಮಾಡಿದ ಹರ್ಭಜನ್ ಸಿಂಗ್

ಭಾನುವಾರದಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಭಾರತ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ನಿಂದ ಈ ಜಯ ಗಳಿಸಿಕೊಟ್ಟಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಭಾರತದ ಈ ಗೆಲುವನ್ನು ಭಾರತೀಯರು ಭರ್ಜರಿಯಾಗಿ ಸಂಭ್ರಮಿಸಿದ್ದು, ಒಂದು ದಿನ ಮುಂಚಿತವಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಇದರ ಮಧ್ಯೆ ಪಾಕಿಸ್ತಾನ ಸೋತಿರುವುದರಿಂದ ಆ ತಂಡದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

ಇದರ ಮಧ್ಯೆ ಪಾಕಿಸ್ತಾನದ ಅಭಿಯಾನಿಯೊಬ್ಬ ಪಂದ್ಯವನ್ನು ಟಿವಿಯಲ್ಲಿ ನೋಡುತ್ತಿದ್ದ ವೇಳೆ ತಮ್ಮ ತಂಡ ಪರಾಭವಗೊಳ್ಳುತ್ತಲೇ ಕೋಪದಿಂದ ಟಿವಿ ಒಡೆದು ಹಾಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಹಂಚಿಕೊಂಡಿದ್ದ ವೀರೇಂದ್ರ ಸೆಹ್ವಾಗ್, ಇದು ಕೇವಲ ಆಟವಾಗಿದೆ. ನೆರೆಹೊರೆಯವರನ್ನು ಶಾಂತಗೊಳಿಸಿ ಎಂದು ಟ್ವೀಟ್ ಮಾಡಿದ್ದರು. ಇದೀಗ ಇದೇ ವಿಡಿಯೋವನ್ನು ಹಂಚಿಕೊಂಡಿರುವ ಹರ್ಭಜನ್ ಸಿಂಗ್ ತಮಾಷೆಯ ಕಮೆಂಟ್ ಹಾಕಿದ್ದಾರೆ. ಇಲ್ಲಿಯವರು ಪಟಾಕಿ ಸಿಡಿಸುತ್ತಿದ್ದರೆ ನೆರೆಹೊರೆಯವರು ಟಿವಿ ಒಡೆಯುತ್ತಿದ್ದಾರೆ ಎಂದು ಹರ್ಭಜನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...