alex Certify ಮೃತ ಮಾವುತನಿಗೆ ಅಂತಿಮ ನಮನ ಸಲ್ಲಿಸಿದ ಗಜರಾಜ: ಮನಕಲಕುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತ ಮಾವುತನಿಗೆ ಅಂತಿಮ ನಮನ ಸಲ್ಲಿಸಿದ ಗಜರಾಜ: ಮನಕಲಕುತ್ತೆ ಈ ವಿಡಿಯೋ

ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಇರುವ ಸಂಬಂಧ ತುಂಬಾನೇ ವಿಶೇಷವಾದದ್ದು. ಈ ಅಮೂಲ್ಯವಾದ ಬಂಧವನ್ನ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಇದೇ ಮಾತಿಗೆ ಸಾಕ್ಷಿಯೆಂಬ ಘಟನೆಯೊಂದು ಕೇರಳ ಕೋಟ್ಟಾಯಂನಲ್ಲಿ ನಡೆದಿದೆ.

ಪಲ್ಲಟ್​​ ಬ್ರಹ್ಮದತ್ತನ್​​ ಎಂಬ ಹೆಸರಿನ ಆನೆಯು, ಕೊನೆಯುಸಿರೆಳೆದಿದ್ದ ತನ್ನ ಮಾವುತನಿಗೆ ಅಂತಿಮ ವಿದಾಯ ಹೇಳಿದೆ. ಒಮನಾಚೆಟ್ಟನ್​ ಎಂಬ ಹೆಸರಿನ ಮಾವುತ ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದರು.

ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಕುನ್ನಕ್ಕಾಡ್​ ದಾಮೋದರ್​​ ನಾಯರ್​ ಅಲಿಯಾಸ್​ ಓಮನಾಚೆಟ್ಟನ್​​ಗೆ ಪ್ರಾಣಿಗಳು ಅದರಲ್ಲೂ ವಿಶೇಷವಾಗಿ ಆನೆಗಳು ಅಂದರೆ ಪಂಚಪ್ರಾಣ. ಸುಮಾರು ಆರು ದಶಕಗಳ ಆನೆಯ ಸೇವೆಯನ್ನ ಮಾಡಿದ ಓಮನ್​ ಚೆಟ್ಟನ್​​ ಕ್ಯಾನ್ಸರ್​ನಿಂದ ಜೂನ್​ 3ರಂದು ಸಾವನ್ನಪ್ಪಿದ್ದರು.

ಓಮನ್​ಚೆಟ್ಟಾನ್​ ಹಾಗೂ ಬ್ರಹ್ಮದತ್ತನ್​​ ಕೇರಳದ ದೇವಸ್ಥಾನಗಳ ಹಬ್ಬದಲ್ಲಿ ಅದರಲ್ಲೂ ವಿಶೇಷವಾಗಿ ತ್ರಿಶೂರ್​ ಪೂರಂನಲ್ಲಿ ಭಾಗಿಯಾಗುತ್ತಿದ್ದರು.

ಸ್ಥಳೀಯರು ಆನೆಯನ್ನ ಮೃತದೇಹದ ಬಳಿ ತೆಗೆದುಕೊಂಡು ಬಂದಿದ್ದಾರೆ. ಆನೆಯು ಮೃತದೇಹಕ್ಕೆ ತನ್ನದೇ ರೀತಿಯಲ್ಲಿ ಅಂತಿಮ ನಮನ ಸಲ್ಲಿಸಿದೆ. ಈ ವಿಡಿಯೋವನ್ನ ಫೇಸ್​ಬುಕ್​ನಲ್ಲಿ ಶೇರ್​ ಮಾಡಲಾಗಿದ್ದು ನೆಟ್ಟಿಗರ ಕಣ್ಣಲ್ಲಿ ನೀರು ಜಿನುಗಿದೆ. ಈ ವಿಡಿಯೋ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.

ഇന്ന്‌ മരണപ്പെട്ട പാപ്പാന്‍ ഓമനച്ചേട്ടനെ അവസാനമായി കാണാന്‍ തന്റെ ആന ബ്രഹ്‌മദത്തന്‍ വീട്ടിലെത്തിയപ്പോള്‍…??

Posted by ബിജു നിള്ളങ്ങൽ on Thursday, June 3, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...