alex Certify ತನ್ನ ತದ್ರೂಪು ವ್ಯಕ್ತಿಗೆ ಫ್ಯಾನ್‌ ಆದ ‘ದಿ ರಾಕ್’ ಡ್ವೇಯ್ನ್ ಜಾನ್ಸನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ತದ್ರೂಪು ವ್ಯಕ್ತಿಗೆ ಫ್ಯಾನ್‌ ಆದ ‘ದಿ ರಾಕ್’ ಡ್ವೇಯ್ನ್ ಜಾನ್ಸನ್

ಡಬ್ಲುಡಬ್ಲುಇಯಲ್ಲಿನ ‘ದಿ ರಾಕ್’ ಯಾರಿಗೆ ಗೊತ್ತಿಲ್ಲ ಹೇಳಿ. ಫೈಟ್ ರಿಂಗ್‍ನಲ್ಲಿ ನೋಡದವರು ಹಲವು ಹಾಲಿವುಡ್ ಸಿನಿಮಾಗಳಲ್ಲಂತೂ ಸೂಪರ್‍ಫಿಟ್ ರಾಕ್‍ನ ಸಾಹಸಗಳನ್ನು ನೋಡಿಯೇ ಇರುತ್ತಾರೆ. ಈತನ ನಿಜವಾದ ಹೆಸರು ಡ್ವೇಯ್ನ್ ಜಾನ್ಸನ್. ಈತನಿಗೆ ಲಕ್ಷಾಂತರ ಫ್ಯಾನ್ಸ್ ಇದ್ದರೂ ಕೂಡ, ಇತ್ತೀಚೆಗೆ ಈತ ತನ್ನ ತದ್ರೂಪು ವ್ಯಕ್ತಿಯ ಫ್ಯಾನ್ ಆಗುವ ಸಂದರ್ಭ ಒದಗಿದೆ.

ಹೌದು, ದಿ ರಾಕ್‍ನ ಹೋಲಿಕೆಯುಳ್ಳ ಪೊಲೀಸ್ ಅಧಿಕಾರಿ ಮಾರ್ಗನ್ ಕೌಂಟಿ ಪ್ಯಾಟ್ರೊಲ್‍ನಲ್ಲಿ ಇದ್ದಾರೆ. ಅವರ ಹೆಸರು ಎರಿಕ್ ಫೀಲ್ಡ್ಸ್ ಅಂತ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಎರಿಕ್‍ನ ಫೋಟೊವೊಂದನ್ನು ಇತ್ತೀಚೆಗೆ ಕೌಂಟಿ ಪೊಲೀಸರು ಪೋಸ್ಟ್ ಮಾಡಿದ್ದರು.

‌ʼದಿ ರಾಕ್ʼ ನೋಡಬೇಕು ಎಂದು ದೌಡಾಯಿಸಿದ ಒಬ್ಬ ವ್ಯಕ್ತಿಗಾಗಿ ಈ ಫೋಟೊ ತೆಗೆದು ಹಾಕಿದ್ದೇವೆ ಎಂದು ಪೊಲೀಸರು ಅಡಿಬರಹ ಕೊಟ್ಟಿದ್ದರು. ಭಾರಿ ವೈರಲ್ ಆದ ಈ ಫೋಟೊ, ಕೊನೆಗೆ ದಿ ರಾಕ್ ಕಣ್ಣಿಗೂ ಬಿದ್ದಿದೆ. ಅವರು ಕೂಡ ಟ್ವಿಟರ್‍ನಲ್ಲಿ ತಮ್ಮ ತದ್ರೂಪು ವ್ಯಕ್ತಿಯ ಫೋಟೊ ಪಕ್ಕದಲ್ಲಿ ತಮ್ಮ ಫೋಟೊವೊಂದನ್ನು ಹಾಕಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎರಿಕ್, ಕೈಯಲ್ಲಿ ಟಕಿಲಾದ ಬಾಟಲಿ ಹಿಡಿದು ಥ್ಯಾಂಕ್ಸ್ ಬ್ರದರ್ ಎಂದು ಹಾಕಿದ್ದಾರೆ.

— Dwayne Johnson (@TheRock) August 31, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...