alex Certify ರಿಷಿ ಸುನಕ್​ ಪ್ರಧಾನಿಯಾಗ್ತಿದ್ದಂತೆಯೇ ಟ್ರೆಂಡ್​ನಲ್ಲಿ ಮಾಜಿ ಕ್ರಿಕೆಟಿಗ ಆಶಿಷ್​ ನೆಹ್ರಾ….! ಏಕೆ ಅಂತೀರಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಷಿ ಸುನಕ್​ ಪ್ರಧಾನಿಯಾಗ್ತಿದ್ದಂತೆಯೇ ಟ್ರೆಂಡ್​ನಲ್ಲಿ ಮಾಜಿ ಕ್ರಿಕೆಟಿಗ ಆಶಿಷ್​ ನೆಹ್ರಾ….! ಏಕೆ ಅಂತೀರಾ…..?

ರಿಷಿ ಸುನಕ್ ಅತ್ತ ಇಂಗ್ಲೆಂಡ್​ನ ಪ್ರಧಾನಿಯಾಗುತ್ತಿದ್ದಂತೆಯೇ, ಇತ್ತ ಭಾರತದ ಮಾಜಿ ಬೌಲರ್​ ಆಶಿಷ್​ ನೆಹ್ರಾ ಭಾರಿ ಮುನ್ನೆಲೆಗೆ ಬಂದಿದ್ದಾರೆ. ಅವರ ಫೋಟೋ ಹಾಕಿ ಜನರು ಅಭಿನಂದನೆಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ.

ಇಂಗ್ಲೆಂಡ್​ನ ಸದ್ಯದ ಆರ್ಥಿಕ ಬಿಕ್ಕಟ್ಟನ್ನು ತಲೆದೂಗಿಸಿಕೊಂಡು ಹೋಗುವ ಜವಾಬ್ದಾರಿ ರಿಷಿ ಅವರ ಮೇಲಿದ್ದರೆ, ಇತ್ತ ನೆಹ್ರಾ ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಾಯಕನ ಫೋಟೋಗ ಜೈಜೈಕಾರ ಹಾಕುತ್ತಿದ್ದಾರೆ.

ಅಷ್ಟಕ್ಕೂ ನೆಹ್ರಾ ಅವರೇನೂ ರಿಷಿ ಸುನಕ್​ ಅವರ ಸಂಬಂಧಿಯೇನಲ್ಲ, ಬದಲಿಗೆ ನೆಹ್ರಾ ಅವರು, ನೋಡಲು ಥೇಟ್​ ರಿಷಿ ಸುನಕ್​ ಅವರಂತೆಯೇ ಕಾಣುತ್ತಿರುವುದೇ ನೆಟ್ಟಿಗರು ಇಷ್ಟೊಂದು ಅಭಿನಂದಿಸಲು ಕಾರಣವಾಗಿದೆ. ವಾಸ್ತವವಾಗಿ, ರಿಷಿ ಸುನಕ್ ಮತ್ತು ಆಶಿಶ್ ನೆಹ್ರಾ ಇಬ್ಬರೂ ಬಹುತೇಕ ಒಂದೇ ರೀತಿ ಕಾಣುತ್ತಾರೆ, ಇಬ್ಬರ ಎತ್ತರವೂ ಒಂದೇ ಆಗಿರುತ್ತದೆ, ಇಬ್ಬರೂ ಸಹೋದರರಾಗಿದ್ದು, ಕುಂಭ ಮೇಳದಲ್ಲಿ ಪರಸ್ಪರ ಬೇರ್ಪಟ್ಟಿದ್ದಾರೆ ಎಂದು ಜನರು ತಮಾಷೆ ಮಾಡುತ್ತಿದ್ದಾರೆ.

ಇದೀಗ ನೆಹ್ರಾರಿಂದ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ ವಿರಾಟ್ ಕೊಹ್ಲಿ ಸಣ್ಣವರಿದ್ದಾಗ ಪ್ರಶಸ್ತಿ ಸ್ವೀಕರಿಸಿದ್ದ ಫೋಟೋವೊಂದು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಹ್ರಾ ಜೊತೆ ಕೊಹ್ಲಿ ಎಂದು ಕೆಲವರು ಫೋಸ್ಟ್ ಮಾಡುವ ಬದಲು ರಿಷಿ ಸುನಕ್ ಜೊತೆ ಕೊಹ್ಲಿ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

ಅದೇ ಇನ್ನೊಂದೆಡೆ, ಇಲ್ಲಿಯ ಇಬಿಜಾ ಕ್ಲಬ್​ ತಮ್ಮ ಕ್ಲಬ್​ನ ಪ್ರಮೋಷನ್​ಗಾಗಿ ರಿಷಿ ಸುನಕ್​ ಅವರ ಹೆಸರನ್ನು ಉಲ್ಲೇಖಿಸುತ್ತಿದೆ. ಈ ಕ್ಲಬ್​ಗೆ ಹಲವು ಸೆಲೆಬ್ರಿಟಿಗಳು ಬರುತ್ತಿದ್ದರೂ ರಿಷಿ ಅವರೇನೂ ಇದುವರೆಗೆ ಭೇಟಿ ನೀಡಲಿಲ್ಲ. ಆದರೆ ರಿಷಿ ಅವರನ್ನು ಟ್ಯಾಗ್​ ಮಾಡಿರುವ ಕ್ಲಬ್​ ಈಗ ತಮ್ಮ ಕ್ಲಬ್​ ಪ್ರಮೋಷನ್​ನಲ್ಲಿ ತೊಡಗಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...