alex Certify ಚಾಕಲೇಟ್​ ಕದ್ದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನಟ ಡ್ವೇನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಕಲೇಟ್​ ಕದ್ದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನಟ ಡ್ವೇನ್

ಪ್ರಸಿದ್ಧ ಮಾಜಿ ಕುಸ್ತಿಪಟು ಹಾಗೂ ನಟನಾಗಿರುವ ಡ್ವೇನ್ ಜಾನ್ಸನ್ ಬಾಲ್ಯದಲ್ಲಿ ತಾವು ಮಾಡುತ್ತಿದ್ದ ಕಳ್ಳತನದ ಕುರಿತು ಕುತೂಹಲದ ಮಾಹಿತಿಯನ್ನು ಶೇರ್​ ಮಾಡಿಕೊಂಡಿದ್ದಾರೆ. ತಾವು 14 ವರ್ಷದವರಾಗಿದ್ದಾಗ ಹವಾಯಿಯಲ್ಲಿ ವಾಸಿಸುತ್ತಿದ್ದು, ಈ ಸಂದರ್ಭದಲ್ಲಿ ಸಮೀಪದ ಅಂಗಡಿಯಿಂದ ಪ್ರತಿದಿನ ಸ್ನಿಕರ್ಸ್ ಬಾರ್ ಚಾಕಲೇಟ್​ ಕದಿಯುತ್ತಿದ್ದೆ ಎಂದಿದ್ದಾರೆ.

ಕಾರಣಾಂತರಗಳಿಂದ 1987 ರಲ್ಲಿ ತನ್ನ ಇಡೀ ಕುಟುಂಬ ಹವಾಯಿ ತೊರೆಯಿತು ಎಂದಿರುವ ನಟ, ತನ್ನ ತಪ್ಪನ್ನು ಸರಿಪಡಿಸುವ ಸಲುವಾಗಿ ವಾಪಸ್​ ಹವಾಯಿಗೆ ಮರಳಿ ಅಂಗಡಿಯಲ್ಲಿರುವ ಎಲ್ಲಾ ಸ್ನಿಕರ್ ಬಾರ್‌ಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ತಾನು ಅಂದುಕೊಂಡಂತೆ ಮಾಡಿದೆ. ಅಂಗಡಿಗೆ ಹೋಗಿ ಎಲ್ಲವನ್ನೂ ಖರೀದಿ ಮಾಡಿ $298 ಪಾವತಿಸಿದೆ ಎಂದು ತಿಳಿಸಿದ್ದಾರೆ.

ಬಹಳ ವರ್ಷಗಳ ನಂತರ ಹವಾಯಿಗೆ ಹಿಂತಿರುಗಿ ಮನೆ ನಿರ್ಮಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿರುವುದಾಗಿ 50 ವರ್ಷದ ಈ ನಟ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...