alex Certify ಗ್ವಾಲಿಯರ್ ಬೀದಿಯಲ್ಲಿ ಚಾಟ್​ ಮಾರಾಟ ಮಾಡುತ್ತಿರೋ ‘ಅರವಿಂದ ಕೇಜ್ರಿವಾಲ್ ನೆಟ್ಟಿಗರಿಂದ ಅಚ್ಚರಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ವಾಲಿಯರ್ ಬೀದಿಯಲ್ಲಿ ಚಾಟ್​ ಮಾರಾಟ ಮಾಡುತ್ತಿರೋ ‘ಅರವಿಂದ ಕೇಜ್ರಿವಾಲ್ ನೆಟ್ಟಿಗರಿಂದ ಅಚ್ಚರಿ……!

ಗ್ವಾಲಿಯರ್​: ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ಚಾಟ್​ ಮಾರಾಟ ಮಾಡುತ್ತಿರುವುದನ್ನು ನೋಡಿ ಜನರು ಕಂಗಾಲಾಗಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಆದರೆ ಅಸಲಿಗೆ ಈತ ಅರವಿಂದ್ ಕೇಜ್ರಿವಾಲ್ ಅಲ್ಲ, ಬದಲಿಗೆ ಅವರನ್ನು ಪಕ್ಕಾ ಹೋಲುವ ವ್ಯಕ್ತಿ ಆಗಿದ್ದಾನೆ. “ಅರವಿಂದ್ ಕೇಜ್ರಿವಾಲ್ ಗ್ವಾಲಿಯರ್‌ನಲ್ಲಿ ಚಾಟ್ ಮಾರಾಟ ಮಾಡುತ್ತಿದ್ದಾರೆ” ಎಂದು ಶೀರ್ಷಿಕೆ ಕೊಟ್ಟು ಈ ವಿಡಿಯೋ ವೈರಲ್​ ಆಗಿದೆ.

ಉಡುಪಿನ ಆಯ್ಕೆಯಿಂದ ಹಿಡಿದು ಚಾಟ್​ವಾಲನ ಐಕಾನಿಕ್ ಕ್ಯಾಪ್​ವರೆಗೆ ಕೇಜ್ರಿವಾಲ ಅವರ ಲುಕ್​ ಇದೆ. ಮಾತ್ರವಲ್ಲದೇ ಕೇಜ್ರಿವಾಲ್ ಅವರು ಧರಿಸುವ ಕನ್ನಡಕದಂತೆ ತೋರುವ ಕನ್ನಡವನ್ನೂ ಹಾಕಿಕೊಂಡಿದ್ದರಿಂದ ನೋಡುಗರು ಇವರೇ ಕೇಜ್ರಿವಾಲ ಎನ್ನುತ್ತಿದ್ದಾರೆ.

“ದೆಹಲಿಯ ಕೇಜ್ರಿವಾಲ್ ನಾಗರಿಕರಿಗೆ ಅನೇಕ ಉಚಿತ ಕೊಡುಗೆಯನ್ನು ನೀಡಿದ್ದರೂ, ಗ್ವಾಲಿಯರ್‌ನ ಕೇಜ್ರಿವಾಲ್ ಗುಣಮಟ್ಟವನ್ನು ನಂಬುತ್ತಾರೆ” ಎಂದು ಟ್ವಿಟರ್​ ಬಳಕೆದಾರ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಶೀಘ್ರದಲ್ಲೇ, ಕೇಜ್ರಿವಾಲ್-ಡೊಪ್ಪೆಲ್‌ಗ್ಯಾಂಗರ್, ಗ್ವಾಲಿಯರ್‌ನಲ್ಲಿನ ಇತರ ಆಹಾರ ಮಳಿಗೆಗಳಿಗಿಂತ ಭಿನ್ನವಾಗಿ, ಅವರು ಅತ್ಯುತ್ತಮ ಗುಣಮಟ್ಟದ ಚಾಟ್ ಅನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಾರೆ ಎಂದು ಹಲವರು ಇದನ್ನು ನೋಡಿ ವ್ಯಂಗ್ಯವಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...