
ಹೌದು, ದಿ ರಾಕ್‍ನ ಹೋಲಿಕೆಯುಳ್ಳ ಪೊಲೀಸ್ ಅಧಿಕಾರಿ ಮಾರ್ಗನ್ ಕೌಂಟಿ ಪ್ಯಾಟ್ರೊಲ್‍ನಲ್ಲಿ ಇದ್ದಾರೆ. ಅವರ ಹೆಸರು ಎರಿಕ್ ಫೀಲ್ಡ್ಸ್ ಅಂತ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಎರಿಕ್‍ನ ಫೋಟೊವೊಂದನ್ನು ಇತ್ತೀಚೆಗೆ ಕೌಂಟಿ ಪೊಲೀಸರು ಪೋಸ್ಟ್ ಮಾಡಿದ್ದರು.
ʼದಿ ರಾಕ್ʼ ನೋಡಬೇಕು ಎಂದು ದೌಡಾಯಿಸಿದ ಒಬ್ಬ ವ್ಯಕ್ತಿಗಾಗಿ ಈ ಫೋಟೊ ತೆಗೆದು ಹಾಕಿದ್ದೇವೆ ಎಂದು ಪೊಲೀಸರು ಅಡಿಬರಹ ಕೊಟ್ಟಿದ್ದರು. ಭಾರಿ ವೈರಲ್ ಆದ ಈ ಫೋಟೊ, ಕೊನೆಗೆ ದಿ ರಾಕ್ ಕಣ್ಣಿಗೂ ಬಿದ್ದಿದೆ. ಅವರು ಕೂಡ ಟ್ವಿಟರ್‍ನಲ್ಲಿ ತಮ್ಮ ತದ್ರೂಪು ವ್ಯಕ್ತಿಯ ಫೋಟೊ ಪಕ್ಕದಲ್ಲಿ ತಮ್ಮ ಫೋಟೊವೊಂದನ್ನು ಹಾಕಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎರಿಕ್, ಕೈಯಲ್ಲಿ ಟಕಿಲಾದ ಬಾಟಲಿ ಹಿಡಿದು ಥ್ಯಾಂಕ್ಸ್ ಬ್ರದರ್ ಎಂದು ಹಾಕಿದ್ದಾರೆ.