alex Certify 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೆಲಸ ಕೇಳಿಕೊಂಡು ಠಾಣೆಗೇ ಬಂದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೆಲಸ ಕೇಳಿಕೊಂಡು ಠಾಣೆಗೇ ಬಂದ…!

ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕ್ರಿಮಿನಲ್​ ಒಬ್ಬ ಏಕಾಏಕಿ ಒಂದು ದಿನ ಪೊಲೀಸ್​ ಠಾಣೆಗೆ ಕಾಲಿಟ್ಟಾಗ ಅಲ್ಲಿನ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಎಂಪುಮಲಂಗಾ ಪ್ರಾಂತ್ಯದ ಪೊಲೀಸ್​ ಅಧಿಕಾರಿಗಳು ಈ ಶಾಕ್​ಗೆ ಒಳಗಾಗಿದ್ದು, ಆತನೇನು ತನ್ನ ತಪ್ಪಿಗಾಗಿ ಶರಣಾಗಲು ಠಾಣೆ ಮುಂದೆ ಹಾಜರಾಗಿರಲಿಲ್ಲ.

ಪೊಲೀಸ್​ ನೇಮಕಾತಿ ಡ್ರೈವ್‌ಗಾಗಿ ಆತ ಅರ್ಜಿ ಸಲ್ಲಿಕೆ ಕುರಿತು ವಿಚಾರಿಸಲು ಬಂದಿದ್ದು, ಅಂತಿಮವಾಗಿ ಆತನನ್ನು ಬಂಧಿಸಲಾಯಿತು.

2015ರಲ್ಲಿ ಥಾಮಸ್​ ಎನ್​ಕೋಬೊ ಅವರು ಹಾರ್ಡ್​ವೇರ್​ ಉತ್ಪನ್ನಗಳನ್ನು ಕದ್ದಿದ್ದ ಎಂದು ಆರೋಪಿಸಲಾಗಿತ್ತು. ಆತ ಗ್ರಾಹಕನಿಗೆ ರವಾನೆ ಮಾಡುವ ಬದಲು ಆ ಮಾಲಿನೊಂದಿಗೆ ಓಡಿಹೋಗಿದ್ದ. ಆ ಉತ್ಪನ್ನವನ್ನು ಬೇರ ವಿಳಾಸಕ್ಕೆ ತಲುಪಿಸಿ, ಮಾಲಿಕರಿಂದ ಮುಚ್ಚಿಟ್ಟಿದ್ದ.

ಕಂಪನಿಯ ವ್ಯವಸ್ಥಾಪಕರು ಇನ್​ವಾಯ್ಸ್​ಗಳನ್ನು ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಶೀಘ್ರದಲ್ಲೇ, ಪ್ರಕರಣವನ್ನು ದಾಖಲಿಸಲಾಯಿತು ಮತ್ತು ಆತನ ಹೆಸರನ್ನು ವಾಂಟೆಡ್​ ಪಟ್ಟಿಗೆ ಸೇರಿಸಲಾಗಿತ್ತು.

ಪೊಲೀಸರು ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಏಳು ವರ್ಷ ತಲೆಮರೆಸಿಕೊಂಡಿದ್ದ. ಈ ವರ್ಷ ಆಗಸ್ಟ್​ 15ರಂದು ಎನ್​ಕೋಬೋ ಸ್ವತಃ ಪೊಲೀಸರನ್ನು ಸಂಪರ್ಕಿಸಿದಾಗ ಪ್ರಕರಣ ಕೊನೆಯಾಯಿತು.

ಆತ ಪೊಲೀಸ್​ ನೇಮಕಾತಿ ಡ್ರೈವ್​ಗೆ ಅರ್ಜಿ ಸಲ್ಲಿಸಿದ್ದ, ಅರ್ಜಿಯ ಅಪ್ಡೇಟ್​ ಬಗ್ಗೆ ತಿಳಿಯಲು ಪೊಲೀಸ್​ ಠಾಣೆಗೆ ಭೇಟಿ ನೀಡಿದ್ದ. ಆತನ ಗುರುತು ಪತ್ತೆಯಾದಂತೆ, ಎನ್​ಕೋಬೋನನ್ನು ಬಂಧಿಸಲಾಯಿತು..

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...