alex Certify ʼಡ್ರೋನ್ʼ ಗಳನ್ನ ಯಾರ್ಯಾರು ಬಳಕೆ ಮಾಡಬಹುದು..? ಇಲ್ಲಿದೆ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡ್ರೋನ್ʼ ಗಳನ್ನ ಯಾರ್ಯಾರು ಬಳಕೆ ಮಾಡಬಹುದು..? ಇಲ್ಲಿದೆ ಉಪಯುಕ್ತ ಮಾಹಿತಿ

ತಂತ್ರಜ್ಞಾನ ಲೋಕದಲ್ಲಿ ಡ್ರೋನ್​ಗಳು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿವೆ. ಸರಳ ಫೋಟೋಗ್ರಫಿಯಿಂದ ಹಿಡಿದು ಗಡಿಯ ಮೇಲೆ ಕಣ್ಣಿಡುವವರೆಗೂ ಡ್ರೋನ್​​ನ ಸಾಮರ್ಥ್ಯ ಇಡೀ ಜಗತ್ತಿಗೇ ತಿಳಿದಿದೆ. ಈಗಂತೂ ಫುಡ್​ ಡೆಲಿವರಿ ಅಪ್ಲಿಕೇಶನ್​ಗಳೂ ಸಹ ಡ್ರೋನ್​​ಗಳನ್ನ ಬಳಸಿಯೇ ಫುಡ್ ಡೆಲಿವರಿ ಮಾಡಲು ಮುಂದಾಗಿವೆ.

ಡ್ರೋನ್​ ಒಂದು ಎಲೆಕ್ಟ್ರಿಕ್​ ಸಾಧನವಾಗಿದ್ದರೂ ಸಹ ಇದರ ಬಳಕೆ ಬಗ್ಗೆ ಕೆಲವು ನಿರ್ದಿಷ್ಟ ಮಾನದಂಡಗಳು ಇದೆ. ಹೀಗಾಗಿ ಡ್ರೋನ್​ ಕ್ಯಾಮರಾಗಳನ್ನ ಕೊಳ್ಳುವ ಮುನ್ನ ಕೆಲವೊಂದಿಷ್ಟು ಅಂಶಗಳನ್ನ ಗಮನದಲ್ಲಿ ಇಡಬೇಕಾಗುತ್ತೆ. ಹಾಗಾದರೆ ಯಾರು ಯಾವ್ಯಾವ ಡ್ರೋನ್​ಗಳನ್ನ ಬಳಕೆ ಮಾಡಬಹುದು ಅನ್ನೋದಕ್ಕೆ ಇಲ್ಲಿದೆ ಮಾಹಿತಿ :

ನ್ಯಾನೋ ಡ್ರೋನ್​ : ಅತ್ಯಂತ ಲಘುವಾದ ಈ ಡ್ರೋನ್​ಗಳು ಅಬ್ಬಬ್ಬಾ ಅಂದರೆ 250 ಗ್ರಾಂ ತೂಕ ಹೊಂದಿರಬಹುದು. ಹೆಸರಿಲ್ಲದ ಏರ್​ಕ್ರಾಫ್ಟ್​ ಸಿಸ್ಟಮ್​ ನಿಯಮ 2021ರ ಪ್ರಕಾರ ಈ ಡ್ರೋನ್​ಗಳನ್ನ ಹಾರಿಸಲು ಯಾವುದೇ ಲೈಸೆನ್ಸ್​ ಅವಶ್ಯಕತೆ ಇರೋದಿಲ್ಲ.

ಮೈಕ್ರೋ ಹಾಗೂ ಸಣ್ಣ ಡ್ರೋನ್​ : ಈ ಡ್ರೋನ್​ಗಳು 250 ಗ್ರಾಂಗಿಂತ ಅಧಿಕ ಹಾಗೂ 2 ಕೆಜಿಗಿಂತ ಕಡಿಮೆ ತೂಕವನ್ನ ಹೊಂದಿರುತ್ತವೆ. ಸಣ್ಣ ಡ್ರೋನ್​ಗಳು 2 ಕೆಜಿಗಿಂತ ಅಧಿಕ ಹಾಗೂ 25 ಕೆಜಿಗಿಂತ ಕಡಿಮೆ ತೂಕವನ್ನ ಹೊಂದಿದೆ. ಈ ಡ್ರೋನ್​ಗಳನ್ನ ಬಳಕೆ ಮಾಡುವವರು ಯುಎಎಸ್​ ಆಪರೇಟರ್​ ಪರ್ಮಿಟ್​ ಹೊಂದಿರೋದು ಅನಿವಾರ್ಯವಾಗಿದೆ.

ಮಧ್ಯಮ ಹಾಗೂ ದೊಡ್ಡ ಡ್ರೋನ್​ : ಮಧ್ಯಮ ಗಾತ್ರದ ಡ್ರೋನ್​ಗಳು 25 ಕೆಜಿಗಿಂತ ಅಧಿಕ ಹಾಗೂ 150 ಕೆಜಿಗಿಂತ ಕಡಿಮೆ ತೂಕವನ್ನ ಹೊಂದಿರಬೇಕು. ಅದೇ ರೀತಿ ದೊಡ್ಡ ಗಾತ್ರದ ಡ್ರೋನ್​ಗಳು 150ಕೆಜಿಗಿಂತ ಅಧಿಕ ತೂಕವನ್ನ ಹೊಂದಿರುತ್ತದೆ. ಇವೆರಡರಲ್ಲಿ ಯಾವುದೇ ಡ್ರೋನ್​ಗಳನ್ನ ಬಳಕೆ ಮಾಡೋ ಪೈಲಟ್​​ಗಳು ಯುಎಎಸ್​ ಆಪರೇಟರ್​ ಪರ್ಮಿಟ್​ – || ಹೊಂದಿರಬೇಕು.

ಇನ್ನು ಡ್ರೋನ್​ ನಿರ್ವಹಿಸಲು ಅನುಮತಿ ನೀಡಲಾಗುವ ಪರವಾನಗಿಯಲ್ಲಿ ಎರಡು ವಿಧಗಳಿವೆ. ಇದರಲ್ಲಿ ಒಂದು ವಿದ್ಯಾರ್ಥಿ ರಿಮೋಟ್​ ಪೈಲಟ್​ ಪರವಾನಗಿ ಹಾಗೂ ಇನ್ನೊಂದು ರಿಮೋಟ್​ ಪೈಲಟ್​ ಪರವಾನಗಿ. ಈ ಯಾವುದೇ ಪರವಾನಗಿ ಹೊಂದಿರುವವರು ವಾಣಿಜ್ಯ ಉದ್ದೇಶಕ್ಕೆ ಡ್ರೋನ್​ ಬಳಕೆ ಮಾಡುವವರಾಗಿದ್ದರೆ ಕನಿಷ್ಟ 18 ವರ್ಷ ಹಾಗೂ ಗರಿಷ್ಟ 65 ವರ್ಷದೊಳಗಿನವರಾಗಿರಬೇಕು.

ಇದು ಮಾತ್ರವಲ್ಲದೇ ಡ್ರೋನ್​ ಲೈಸೆನ್ಸ್​ ಪಡೆಯುವವರು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೇ ಡಿಜಿಸಿಎ ಒದಗಿಸುವ ವೈದ್ಯಕೀಯ ಪರೀಕ್ಷೆ ಹಾಗೂ ಹಿನ್ನಲೆ ಪರಿಶೀಲನೆಗಳಲ್ಲಿ ಪಾಸ್​ ಆಗಬೇಕು.

ವಿದ್ಯಾರ್ಥಿ ರಿಮೋಟ್​ ಪೈಲಟ್​ ಲೈಸೆನ್ಸ್​ : ಈ ಪರವಾನಿಗೆಯು 5 ವರ್ಷಗಳ ಮಾನ್ಯತೆಯನ್ನ ಹೊಂದಿರುತ್ತದೆ. ಮುಂದಿನ 2 ವರ್ಷಗಳಿಗೆ ಈ ಲೈಸೆನ್ಸ್​ನ್ನು ನವೀಕರಣ ಮಾಡಿಕೊಳ್ಳಬಹುದು.

ರಿಮೋಟ್​ ಪೈಲಟ್​ ಲೈಸೆನ್ಸ್​ : ಈ ಲೈಸೆನ್ಸ್​ಗಳಿಗೆ 10 ವರ್ಷಗಳ ಮಾನ್ಯತೆ ಇರಲಿದೆ. ಅವಧಿ ಮೀರಿದ ಲೈಸೆನ್ಸ್​ಗಳನ್ನ ಮುಂದಿನ 10 ವರ್ಷಗಳಿಗೆ ನವೀಕರಿಸಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...