alex Certify ನಿಯಂತ್ರಣ ತಪ್ಪಿ ಫುಟ್​ಪಾಥ್ ಮೇಲಿದ್ದ ಮಕ್ಕಳ ಬಳಿ ನುಗ್ಗಿದ ಕಾರು: ಬಾಲಕನ ಸ್ಥಿತಿ ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಯಂತ್ರಣ ತಪ್ಪಿ ಫುಟ್​ಪಾಥ್ ಮೇಲಿದ್ದ ಮಕ್ಕಳ ಬಳಿ ನುಗ್ಗಿದ ಕಾರು: ಬಾಲಕನ ಸ್ಥಿತಿ ಗಂಭೀರ

ನವದೆಹಲಿ: ದೆಹಲಿಯ ಗುಲಾಬಿ ಬಾಗ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಫುಟ್​ಪಾಥ್​ ಮೇಲೆ ಕಾರನ್ನು ನುಗ್ಗಿಸಿದ ಭಯಾನಕ ಘಟನೆ ನಡೆದಿದೆ. ಈ ಘಟನೆಯಲ್ಲಿ ಫುಟ್‌ಪಾತ್‌ನಲ್ಲಿ ನಿಂತಿದ್ದ ಮೂವರು ಮಕ್ಕಳ ಮೇಲೆ ಕಾರು ಹರಿದಿದೆ.

ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಿಯಂತ್ರಣ ತಪ್ಪಿದ ಕಾರು ಫುಟ್​ಪಾಥ್​ ಮೇಲೆ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು. ಅಲ್ಲಿ ಮಕ್ಕಳು ಆಟವಾಡುತ್ತಿದ್ದರು. ಕಾರು ಅವರ ಮೇಲೆ ಹರಿದಿದೆ. ಕಾರಿನ ವೇಗ ಕಂಡು ಮಕ್ಕಳು ಚೆಲ್ಲಾಪಿಲ್ಲಿಯಾಗಿದ್ದಾರೆ. ಇಬ್ಬರು ಮಕ್ಕಳು ತಪ್ಪಿಸಿಕೊಂಡರೂ ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.

ಕಾರಿನಿಂದ ಹೊರಬಂದ ನಂತರ ಸ್ಥಳೀಯರು ಚಾಲಕನಿಗೆ ಥಳಿಸಿದ ದೃಶ್ಯವೂ ವಿಡಿಯೋದಲ್ಲಿದೆ. ಚಾಲಕನನ್ನು 30 ವರ್ಷದ ಪ್ರತಾಪ್ ನಗರದ ನಿವಾಸಿ ಎಂದು ಹೇಳಲಾಗಿದೆ. ಶಾಲೆಯ ಬಳಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ನಂತರ ಈ ದುರ್ಘಟನೆ ನಡೆದಿದೆ. ತನಿಖೆ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...