alex Certify Shocking: ʼಖಿನ್ನತೆʼಗೆ ಒಳಗಾಗಿ ಕೂದಲು ತಿನ್ನುವ ಅಭ್ಯಾಸ ಮಾಡಿಕೊಂಡ ಹುಡುಗಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ʼಖಿನ್ನತೆʼಗೆ ಒಳಗಾಗಿ ಕೂದಲು ತಿನ್ನುವ ಅಭ್ಯಾಸ ಮಾಡಿಕೊಂಡ ಹುಡುಗಿ….!

ಖಿನ್ನತೆಗೆ ಒಳಗಾಗಿ ತನ್ನ ಕೂದಲನ್ನೇ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದ ಹುಡುಗಿಯೊಬ್ಬಳ ಹೊಟ್ಟೆಯಿಂದ ಭಾರೀ ಕೇಶದುಂಡೆಯನ್ನು ವೈದ್ಯರು ವರ್ಷಗಳ ಹಿಂದೆ ಹೊರ ತೆಗೆದಿದ್ದರು.

ಆದರೆ ಈಕೆ ಅದೇ ಅಭ್ಯಾಸವನ್ನು ಮತ್ತೊಮ್ಮೆ ಬೆಳೆಸಿಕೊಂಡಿದ್ದು, ಸೂರತ್‌ನ ನವ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಆಕೆಯ ಹೊಟ್ಟೆಯಿಂದ ಅರ್ಧ ಕೆಜಿಯಷ್ಟು ಕೇಶದುಂಡೆಯನ್ನು ಹೊರತೆಗೆದಿದ್ದಾರೆ.

ʼಕರ್ವಾಚೌತ್‌ʼ ಜಾಹೀರಾತಿನ ಮೂಲಕ ವಿವಾದಕ್ಕೆ ಸಿಲುಕಿದ ಡಾಬರ್

ಟ್ರಿಕೋಬೆಜ಼ೋವರ್‌ ಎಂದು ಕರೆಯಲ್ಪಡುವ ಈ ಮಾನಸಿಕ ಸ್ಥಿತಿಯಲ್ಲಿರುವ ವ್ಯಕ್ತಿ ತನ್ನದೇ ಕೂದಲನ್ನು ಕಿತ್ತು ಕಿತ್ತು ತಿನ್ನುವಂತೆ ಆಗುತ್ತದೆ. ಈ ಕಾರಣದಿಂದ ಕೂದಲೆಲ್ಲಾ ಹೊಟ್ಟೆಯಲ್ಲಿ ಸೇರಿಕೊಂಡು ದೊಡ್ಡ ಉಂಡೆಯಾಗುತ್ತದೆ.

ಸೆಪ್ಟೆಂಬರ್‌ನಲ್ಲಿ ಇಂಥದ್ದೇ ಪ್ರಕರಣವೊಂದನ್ನು ಲಖನೌನ ಬಲ್ರಾಮ್ಪುರ್‌ ಆಸ್ಪತ್ರೆಯ ವೈದ್ಯರು ನಿರ್ವಹಿಸಿದ್ದು, 17 ವರ್ಷದ ಟೀನೇಜರ್‌ ಒಬ್ಬಳ ಹೊಟ್ಟೆಯಿಂದ ಭಾರೀ ಕೇಶದುಂಡೆ ಹೊರತೆಗೆದಿದ್ದಾರೆ.

ʼತಲೆಹೊಟ್ಟುʼ ಸಮಸ್ಯೆಯೇ….? ಇಲ್ಲಿದೆ ಪರಿಹಾರ….!

ಬಹಳ ದಿನಗಳಿಂದ ಸರಿಯಾಗಿ ಆಹಾರ ಸೇವಿಸದೇ ತೂಕದಲ್ಲಿ ವಿಪರೀತ ಇಳಿದಿದ್ದ ಈಕೆಯನ್ನು ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಕೇಶದುಂಡೆ ಇರುವುದು ಕಂಡುಬಂದಿದೆ.

ಮುಂದೆ ಯಾವ ಮಾರ್ಗದಲ್ಲಿ ಆಕೆಯನ್ನು ಖಿನ್ನತೆಯಿಂದ ಹೊರತರುವುದು ಎಂಬ ಹುಡುಕಾಟದಲ್ಲಿ ವೈದ್ಯರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...