alex Certify ʼಕರ್ವಾಚೌತ್‌ʼ ಜಾಹೀರಾತಿನ ಮೂಲಕ ವಿವಾದಕ್ಕೆ ಸಿಲುಕಿದ ಡಾಬರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕರ್ವಾಚೌತ್‌ʼ ಜಾಹೀರಾತಿನ ಮೂಲಕ ವಿವಾದಕ್ಕೆ ಸಿಲುಕಿದ ಡಾಬರ್

ಗಂಡಂದಿರ ದೀರ್ಘಾಯುಷ್ಯಕ್ಕಾಗಿ ಪತ್ನಿಯರು ಉಪವಾಸ ವ್ರತ ಕೈಗೊಂಡು, ರಾತ್ರಿಯ ವೇಳೆ ಚಂದ್ರನ ದರ್ಶನ ಮಾಡಿದ ಬಳಿಕ ಪತಿಯ ಮುಖ ನೋಡಿ, ಆರತಿ ಮಾಡಿ ಆಹಾರ ಸೇವಿಸುವ ವಿಶಿಷ್ಟ ಹಬ್ಬ ’ಕರ್ವಾ ಚೌತ್‌’. ಇದು ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧಿ. ಇಂಥ ಸಂಸ್ಕೃತಿ, ಪಾರಂಪರಿಕ ಮಹತ್ವದ ಹಬ್ಬಕ್ಕೆ ಆಧುನಿಕ ಜೀವನಶೈಲಿಯ ’ಸಲಿಂಗಿಗಳ’ ಭಾವನೆಯನ್ನು ಡಾಬರ್‌ ಕಂಪನಿಯ ಜಾಹೀರಾತಿನಲ್ಲಿ ಬೆರೆಸಲಾಗಿದೆ.

ಡಾಬರ್‌ನ ಸೌಂದರ್ಯವರ್ಧಕ ಉತ್ಪನ್ನಗಳಾದ ಫೆಮ್‌ ಕ್ರೀಮ್‌ ಗೋಲ್ಡ್‌ ಬ್ಲೀಚ್‌ಗಾಗಿ ಟಿವಿಗೆ ಮಾಡಲಾದ ಜಾಹೀರಾತಿನಲ್ಲಿ ಮಹಿಳಾ ಸಲಿಂಗಿಗಳನ್ನು ಚೆಂದವಾಗಿ ತೋರಿಸಿ, ಕರ್ವಾ ಚೌತ್‌ಗೆ ಅವಮಾನ ಎಸಗಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

BIG NEWS: ಬ್ರಿಟನ್‌ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ

ಜಾಹೀರಾತಿನ ಆರಂಭದಲ್ಲಿ ಇಬ್ಬರು ಸ್ನೇಹಿತೆಯರು ಅಥವಾ ಸೋದರಿಯರು ತಮ್ಮ ಪತಿಯಂದಿರಿಗಾಗಿ ಸಿಂಗಾರಗೊಂಡು ವ್ರತ ಕೈಗೊಳ್ಳುತ್ತಿರುವಂತೆ ಕಾಣುತ್ತದೆ. ಆದರೆ ಚಂದ್ರನ ದರ್ಶನ ಮಾಡಿದ ಬಳಿಕ, ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡಾಗ ಅವರದ್ದು ಸಲಿಂಗಿ ಜೋಡಿ ಎಂದು ಅರಿವಾಗುತ್ತದೆ.

‘ಎಲ್‌ಜಿಬಿಟಿಕ್ಯೂ’ ಸಮುದಾಯ ಅಂದರೆ ಸಲಿಂಗಿಗಳ ಸಮುದಾಯಕ್ಕೆ ಬೆಂಬಲ ನೀಡುವ ಸಂಬಂಧ ಕಂಪನಿಯು ವಿಶಿಷ್ಟ, ಕ್ರಾಂತಿಕಾರಿ ಜಾಹೀರಾತು ಮಾಡಿದೆ ಎಂದು ಕೆಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಸತಿ-ಪತಿ’ ಒಂದಾಗಲು ಸೂಕ್ತವಲ್ಲ ಈ ದಿನ

ಇದಕ್ಕೆ ತೀವ್ರ ಅಸಮಾಧಾನ ಹೊರಹಾಕಿರುವ ಹಿರಿಯ ಮಹಿಳೆಯರು ಮತ್ತು ಧಾರ್ಮಿಕ ಚಿಂತಕರು, ಇಂಥ ಸಲಿಂಗ ಧೋರಣೆ ಬೆಂಬಲಕ್ಕೆ ಹಿಂದೂಗಳ ಸಂಪ್ರದಾಯದ ಹಬ್ಬವೇ ಏಕೆ ಬೇಕಾಯಿತು ಎಂದು ಪ್ರಶ್ನೆ ಹಾಕಿದ್ದಾರೆ.

ಡಾಬರ್‌ ಕಂಪನಿ ಅಲ್ಲ ಇದು, ಬಾಬರ್‌ ಕಂಪನಿ ಇರಬೇಕು. ಇತರ ಧಾರ್ಮಿಕ ಅಲ್ಪಸಂಖ್ಯಾತರ ಹಬ್ಬಗಳ ಸಂಬಂಧ ಇಂಥ ಸಲಿಂಗಿಗಳ ಬೆಂಬಲದ ಜಾಹೀರಾತು ಪ್ರಸಾರವಾಗಿದ್ದರೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿತ್ತು. ಕಂಪನಿಯ ವಿರುದ್ಧ ದೊಡ್ಡ ಪ್ರತಿಭಟನೆ ಆಗುತ್ತಿತ್ತು. ಹಿಂದೂಗಳು ಸಹನಶೀಲರಾಗಿದ್ದಕ್ಕೆ ಪದೇ ಪದೇ ಅವರ ಸಂಪ್ರದಾಯಗಳನ್ನು ಪ್ರಶ್ನಿಸಲಾಗುತ್ತಿದೆ ಎಂದು ನೆಟ್ಟಿಗರು ಬಹುತೇಕರು ತೀವ್ರ ವಿರೋಧ ಹೊರಹಾಕಿದ್ದಾರೆ.

ʼಬ್ರೇಕ್ ಅಪ್ʼ ಆದವ್ರು ಅಪ್ಪಿತಪ್ಪಿ ಈ ಕೆಲಸ ಮಾಡಬೇಡಿ

ಫ್ಯಾಬ್‌ ಇಂಡಿಯಾ, ಸಿಯೆಟ್‌ ಟೈರ್‌ನ ದೀಪಾವಳಿ ಸಂಭ್ರಮದ ಜಾಹೀರಾತುಗಳು ಕೂಡ ಈ ವಾರ ತೀವ್ರ ವಿವಾದ ಹುಟ್ಟುಹಾಕಿದ್ದವು. ಜನರ ತೀವ್ರ ಆಕ್ರೋಶದ ನಂತರ ಜಾಹೀರಾತನ್ನು ಕಂಪನಿಗಳು ವಾಪಸ್‌ ಪಡೆದಿವೆ.

ಪಟಾಕಿ ಸಿಡಿಸಿ ಎನ್ನುವ ನಟ ಆಮೀರ್‌ ಖಾನ್‌, ದೀಪಾವಳಿಗೆ ಮುಸ್ಲಿಮರು ಬಳಸುವ ಪದದ ಬಳಕೆಯಂಥ ಯಡವಟ್ಟುಗಳನ್ನು ಜಾಹೀರಾತಿನಲ್ಲಿ ಜನರು ಗುರುತಿಸಿ ತಮ್ಮ ಅಸಮಾಧಾನವನ್ನು ಪ್ರದರ್ಶಿಸಿದಾಗ ಕಂಪನಿಗಳು ತಮ್ಮ ತಪ್ಪನ್ನು ತಿದ್ದಿಕೊಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...