alex Certify ʼಶತಾಯುಷಿʼ ಆಗಬೇಕೆಂಬ ಆಸೆ ಇದೆಯೇ ? ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ 100 ವರ್ಷ ಆಯಸ್ಸಿನ ರಹಸ್ಯ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶತಾಯುಷಿʼ ಆಗಬೇಕೆಂಬ ಆಸೆ ಇದೆಯೇ ? ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ 100 ವರ್ಷ ಆಯಸ್ಸಿನ ರಹಸ್ಯ !

ದೀರ್ಘಾಯುಷಿಗಳಾಗಬೇಕು ಅನ್ನೋದು ಎಲ್ಲರ ಆಸೆ. ಕನಿಷ್ಠ 100 ವರ್ಷಗಳಾದರೂ ಬದುಕಬೇಕು ಎಂಬ ಗುರಿ ಇರುತ್ತದೆ. ಆದರೆ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಮನುಷ್ಯರ ಜೀವಿತಾವಧಿ 70 ರಿಂದ 75 ವರ್ಷಗಳ ನಡುವೆ ಇರುತ್ತದೆ. ಆದರೆ ಯಾವುದೇ ವ್ಯಕ್ತಿ 100 ವರ್ಷಗಳವರೆಗೆ ಬದುಕಬಹುದು ಎಂದು ವೈಜ್ಞಾನಿಕ ಸಂಶೋಧನೆ ಬಹಿರಂಗಪಡಿಸಿದೆ. ಅದಕ್ಕಾಗಿ ವಿಶೇಷ ಗಮನ ಅಗತ್ಯ.

ಸಂಶೋಧಕರು 100 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಜನರ ಮೇಲೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರಿಯೂತ, ಮೂತ್ರಪಿಂಡ, ಯಕೃತ್ತು, ಅಪೌಷ್ಟಿಕತೆ ಮತ್ತು ರಕ್ತಹೀನತೆ ಹೀಗೆ ಅನೇಕ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ. ವಿಶೇಷ ಅಂದ್ರೆ 100 ವರ್ಷ ಬದುಕಿದವರಲ್ಲಿ ಯಾವ ಸಮಸ್ಯೆಗಳೂ ಕಂಡುಬಂದಿಲ್ಲ.

100 ವರ್ಷಗಳ ಕಾಲ ಬದುಕಿದವರಲ್ಲಿ ಗ್ಲೂಕೋಸ್ ಮಟ್ಟವು 6.5 ಕ್ಕಿಂತ ಹೆಚ್ಚಿಲ್ಲ, ಆದರೆ ರಕ್ತದಲ್ಲಿನ ಕ್ರಿಯೇಟಿನೈನ್ ಮಟ್ಟವು 1.25 ಕ್ಕಿಂತ ಕಡಿಮೆಯಿತ್ತು. ಇಷ್ಟೇ ಅಲ್ಲ, 100 ವರ್ಷಗಳ ಜೀವನದ ರಹಸ್ಯದಲ್ಲಿ ಅಲಾತ್ ಮತ್ತು ಅಲ್ಬುಮಿನ್ ಪಾತ್ರವು ಪ್ರಮುಖವಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಾಪಾಡಿಕೊಳ್ಳಬೇಕು. ಕೆಟ್ಟ ಜೀವನಶೈಲಿ ಇದ್ದರೆ ಅಥವಾ ಆಹಾರದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಂಥವರು 100 ವರ್ಷಗಳ ಕಾಲ ಬದುಕುವುದು ಅಸಾಧ್ಯ.

ಜೀರೋ ಸೈನ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ದೀರ್ಘಾಯುಷಿಯಾಗಲು ಪೋಷಣೆ ಬಹಳ ಮುಖ್ಯ. ವಯಸ್ಸಾದಂತೆ  ಮೂತ್ರಪಿಂಡ ಮತ್ತು ಯಕೃತ್ತಿನ ಸುರಕ್ಷತೆ, ಗ್ಲೂಕೋಸ್ ಮತ್ತು ಯೂರಿಕ್ ಆಮ್ಲದ ಮೇಲೆ ಕಣ್ಣಿಡಬೇಕು. 100 ವರ್ಷಗಳ ಕಾಲ ಬದುಕಲು ಇವುಗಳ ಆರೋಗ್ಯ ಬಹಳ ಮುಖ್ಯ. ಬಯೋಮಾರ್ಕರ್‌ಗಳ ಮೂಲಕ ನಮಗೆ ಬರಬಹುದಾದ ಅಪಾಯವನ್ನು ಅಂದಾಜು ಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ.

ವಯಸ್ಸಿನ ಯಾವುದೇ ಹಂತದಲ್ಲಿ ನಮ್ಮ ಕೊಲೆಸ್ಟ್ರಾಲ್ ಮಟ್ಟ, ಗ್ಲೂಕೋಸ್ ಮಟ್ಟ, ಕ್ರಿಯೇಟಿನೈನ್ ಮಟ್ಟ, ಯೂರಿಕ್ ಆಸಿಡ್ ಮತ್ತು TIBC ಅನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೆ ಯಾವುದೇ ದೈಹಿಕ ಸಮಸ್ಯೆಗಳಿಲ್ಲದೆ ದೀರ್ಘಕಾಲ ಬದುಕಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...