alex Certify ದೆಹಲಿಯ ‘ಸ್ಲಮ್​ ವಾಕಿಂಗ್​ ಟೂರ್​’ಗೆ ನೆಟ್ಟಿಗರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯ ‘ಸ್ಲಮ್​ ವಾಕಿಂಗ್​ ಟೂರ್​’ಗೆ ನೆಟ್ಟಿಗರ ಆಕ್ರೋಶ

ಟೆಂಪಲ್​ ಟೂರಿಸಂ, ಹೆಲ್ತ್​ ಟೂರಿಸಂ, ವೈಲ್ಡ್‌ ಲೈಫ್​ ಟೂರಿಸಂ ಹೀಗೆ ಬಗೆಬಗೆಯ ಕ್ಷೇತ್ರಕ್ಕೆ ಸಂಬಂಧಿಸಿದ ಟೂರಿಸಂ ಬಗ್ಗೆ ಕೇಳಿರುತ್ತೀರಿ, ಸ್ಲಮ್​ ಟೂರಿಸಂ ಗೊತ್ತೇ?

ದೆಹಲಿಯಲ್ಲಿ ಇಂತಹ ವಿಲಕ್ಷಣ ಸ್ಲಂ ವಾಕಿಂಗ್​ ಟೂರಿಸಂಗೆ ಜನರನ್ನು ಆಹ್ವಾನಿಸುವ ಪ್ಯಾಕೇಜ್​ ಒಂದು ಕಾಣಿಸಿಕೊಂಡಿದ್ದು, ನೆಟ್ಟಿಗರು ವ್ಯಾಪಕವಾಗಿ ಈ ವ್ಯವಹಾರವನ್ನು ಟೀಕಿಸಿದ್ದಾರೆ.

ದೆಹಲಿಯಲ್ಲಿ ಅಂತಹ ಪ್ರವಾಸವನ್ನು ವ್ಯವಸ್ಥೆ ಮಾಡುವ ಕಂಪನಿಯ ಆಹ್ವಾನದ ಸ್ಕ್ರೀನ್‌ ​ಗ್ರಾಬ್​ ಅನ್ನು ವ್ಯಕ್ತಿಯೊಬ್ಬರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಲಂ ಟೂರ್​ಗೆ 1,800 ರೂ. ನಿಗದಿ ಮಾಡಿರುವುದು ಕಂಡುಬರುತ್ತದೆ.

ಇದು ಟ್ವಿಟರ್​ನಲ್ಲಿ ಆಕ್ರೋಶ ಹುಟ್ಟುಹಾಕಿದೆ ಮತ್ತು ವ್ಯಾಪಕ ಚರ್ಚೆಗೂ ಕಾರಣವಾಯಿತು. ಇಂತಹ ಪ್ರವಾಸಗಳನ್ನು ವ್ಯವಸ್ಥೆ ಮಾಡುವ ಕೆಲವು ಸಂಸ್ಥೆಗಳು ಆದಾಯದ ಭಾಗವನ್ನು ಆ ಪ್ರದೇಶಗಳ ಅಭಿವೃದ್ಧಿ ಯೋಜನೆಗಳಿಗೆ, ಎನ್​ಜಿಒಗಳ ಮೂಲಕ ಅಥವಾ ಬೇರೆ ರೀತಿಯಲ್ಲಿ ಹೂಡಿಕೆ ಮಾಡುತ್ತವೆ ಎಂಬುದನ್ನು ಸಹ ಗಮನಿಸಬೇಕು. ಕೊಳೆಗೇರಿ ನಿವಾಸಿಗಳು ಆದಾಯದ ಸಾಧನವಾಗಿ ಆಯೋಜಿಸುವ ಯೋಜನೆಗಳಿಂದ ಇವುಗಳನ್ನು ಪ್ರತ್ಯೇಕಿಸಬೇಕು.

ಇಂತಹ ಪ್ರವಾಸಗಳು ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿವೆ, ಅದರಲ್ಲೂ ಮುಖ್ಯವಾಗಿ ಮುಂಬೈನ ಧಾರಾವಿ ಸ್ಲಮ್​, ಸ್ಲಮ್​ಡಾಗ್​ ಮಿಲಿಯನೇರ್​ ಚಿತ್ರದ ಯಶಸ್ಸಿನಿಂದ ಹೆಚ್ಚು ಜನಪ್ರಿಯವಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...