alex Certify ಪ್ರವಾಸಕ್ಕೆ ಹೋದಾಗಲೇ ದುರಂತ: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಕ್ಕೆ ಹೋದಾಗಲೇ ದುರಂತ: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಜನ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಪ್ರವಾಸಿಗರು ಮೃತಪಟ್ಟಿದ್ದಾರೆ.

ಪ್ರವಾಸಕ್ಕೆ ತೆರಳಿದ ಹುಬ್ಬಳ್ಳಿಯ ನಜೀರ್ ಅಹ್ಮದ್(40), ಅಲ್ಫಿಯಾ ಅಹಮದ್(10), ಮೋಹಿನ್ (6), ಇಫ್ರಾ ಅಹಮದ್(15), ಹಬೀದ್ ಅಹಮ್ಮದ್(12), ರೇಷ್ಮಾ ಉನ್ನೀಸಾ(38) ಮೃತಪಟ್ಟವರು ಎಂದು ಹೇಳಲಾಗಿದೆ. ಊಟ ಮಾಡಿದ ಬಳಿಕ ವಿಶ್ರಾಂತಿ ಪಡೆಯುವಾಗ ಮಗುವೊಂದು ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದಿದ್ದು, ಮಗುವನ್ನು ರಕ್ಷಿಸಲು ಒಬ್ಬರ ಹಿಂದೆ ಒಬ್ಬರು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರು ಹುಬ್ಬಳ್ಳಿಯ ಈಶ್ವರ ನಗರ ನಿವಾಸಿಗಳು. ಒಟ್ಟು ಎಂಟು ಮಂದಿ ಪ್ರವಾಸಕ್ಕೆ ತೆರಳಿದ್ದರು. ಇಬ್ಬರು ಮಹಿಳೆಯರು ನೀರಿಗೆ ಇಳಿದಿರಲಿಲ್ಲ ಎಂದು ಹೇಳಲಾಗಿದೆ.

ಆರು ಜನರ ಮೃತದೇಹಗಳನ್ನು ನದಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ದಾಂಡೇಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ದಾಂಡೇಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...