alex Certify SHOCKING: ಕೊರೊನಾದಿಂದ ಕಡಿಮೆಯಾಯ್ತು ಭಾರತೀಯರ ಜೀವಿತಾವಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕೊರೊನಾದಿಂದ ಕಡಿಮೆಯಾಯ್ತು ಭಾರತೀಯರ ಜೀವಿತಾವಧಿ

ವಿಶ್ವದಾದ್ಯಂತ ಕೊರೊನಾ ವೈರಸ್ ಜನರ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಕೊರೊನಾ, ಜನರ ವಯಸ್ಸಿನ ಮೇಲೆ ಪರಿಣಾಮ ಬೀರಿದೆ. ಭಾರತೀಯರ ಜೀವಿತಾವಧಿಯು ಸುಮಾರು ಎರಡು ವರ್ಷಗಳಷ್ಟು ಕಡಿಮೆಯಾಗಿದೆ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ.

ಪದವೀಧರರಿಗೆ ಗುಡ್ ನ್ಯೂಸ್: 2,000 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ SBI ಅರ್ಜಿ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮುಂಬೈನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸ್ಟಡೀಸ್ ವಿಜ್ಞಾನಿಗಳು ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಈ ವರದಿಯ ಪ್ರಕಾರ, ಪುರುಷರು ಮತ್ತು ಮಹಿಳೆಯರ ಜೀವಿತಾವಧಿ 2019 ರಲ್ಲಿ 69.5 ವರ್ಷಗಳಾಗಿತ್ತು. 2020 ರಲ್ಲಿ ಮಹಿಳೆಯರ ಜೀವಿತಾವಧಿ 69.8 ವರ್ಷಗಳಿಗೆ ಇಳಿದಿದೆ.

ಜೀವಿತಾವಧಿ ಅಂದರೆ ಜನರ ಬದುಕುಳಿಯುವಿಕೆಯ ಸರಾಸರಿ. ಇದು ವ್ಯಕ್ತಿಯ ಸರಾಸರಿ ಜೀವನದ ಅಂದಾಜನ್ನು ಹೇಳುತ್ತದೆ. 35-69 ವಯಸ್ಸಿನ ಪುರುಷರ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಿದೆ. ಉಳಿದ ವರ್ಷಗಳಿಗೆ ಹೋಲಿಸಿದರೆ 2020 ರಲ್ಲಿ 35-79 ವರ್ಷ ವಯಸ್ಸಿನೊಳಗಿನ ಹೆಚ್ಚಿನ ಜನರು ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ.

ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಐಸಿಐಸಿಐ ಬ್ಯಾಂಕ್ ಷೇರು

ಲಸಿಕೆ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ಜೊತೆ ಉತ್ತಮ ಆಹಾರ ಸೇವನೆಯಿಂದ ಜೀವಿತಾವಧಿಯನ್ನು ಹೆಚ್ಚಿಸಬಹುದು ಎನ್ನಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...