alex Certify ʼಗರ್ಭಪಾತʼದ ವಿಚಾರವಾಗಿ ಜೋಕ್​ ಮಾಡಿ ಕೆಂಗಣ್ಣಿಗೆ ಗುರಿಯಾದ ಯುಟ್ಯೂಬರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗರ್ಭಪಾತʼದ ವಿಚಾರವಾಗಿ ಜೋಕ್​ ಮಾಡಿ ಕೆಂಗಣ್ಣಿಗೆ ಗುರಿಯಾದ ಯುಟ್ಯೂಬರ್​

ಗರ್ಭಪಾತದ ಮೇಲಿನ ನಿಷೇಧವನ್ನು ಜಾರಿಗೊಳಿಸುವ ಅಮೆರಿಕ ಸುಪ್ರೀಂ ಕೋರ್ಟ್​ನ ತೀರ್ಪು ವಿಶ್ವಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಟ್ವಿಟರ್​ನಲ್ಲಿ ಹಾಸ್ಯನಟನೊಬ್ಬ ಮಾಡಿರುವ ಟ್ವೀಟ್​ ಇಂಟರ್ನೆಟ್​ನಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಹಾಸ್ಯನಟ ಹಾಗೂ ಯುಟ್ಯೂಬರ್​​ ಸಮಯ್​ ರೈನಾ ಟ್ವಿಟರ್​ನಲ್ಲಿ ಗರ್ಭಪಾತದ ಸಂಬಂಧ ಜೋಕ್​ ಒಂದನ್ನು ಶೇರ್​ ಮಾಡಿದ್ದು, ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಸಮಯ್​ ರೈನಾ ಗರ್ಭಪಾತದ ಬಗ್ಗೆ ಜೋಕ್​ ಒಂದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ನಿನ್ನೆ ನಾನು ಅರ್ಧ ಗಂಟೆ ಯೋಚನೆ ಮಾಡಿ ನನ್ನ ಗರ್ಲ್​ಫ್ರೆಂಡ್​ ಬಗ್ಗೆ ಒಂದು ಫನ್ನಿ ಟ್ವೀಟ್​ ಬರೆದಿದ್ದೆ. ಆದರೆ ಆಕೆ ಅದನ್ನು ಇಷ್ಟ ಪಡದ ಕಾರಣ ನಾನು ಅದನ್ನು ಡಿಲೀಟ್​ ಮಾಡಬೇಕಾಯ್ತು. ಮುಂದಿನ ದಿನಗಳಲ್ಲಿ ನಾನು ನಿನ್ನನ್ನು ಗರ್ಭಪಾತ ಮಾಡಿಸಲು ಕರೆದುಕೊಂಡು ಹೋದಾಗಲೂ ನನ್ನ ದೇಹ. ನನ್ನ ಆಯ್ಕೆ ಎನ್ನಬೇಡ ಎಂದು ಬರೆದಿದ್ದಾರೆ.

ಇದೇ ಜೋಕ್​ನ್ನು ಮುಂದುವರಿಸಿ ಮತ್ತೊಂದು ಪೋಸ್ಟ್​ನ್ನು ಟ್ವೀಟ್​ ಮಾಡಿದ್ದಾರೆ. ನನ್ನ ಗೆಳತಿ ನನ್ನ ಫನ್ನಿ ಟ್ವೀಟ್​ನ್ನು ಅಳಿಸುವಂತೆ ಮಾಡಿದ್ದಾಳೆ ಎಂದು ನಾನು ಸರಳವಾದ ಹಾಸ್ಯವನ್ನು ಮಾಡಿದ್ದೇನೆ. ಅಂದಮೇಲೆ ನಾನು ಆಕೆಯ ಗರ್ಭವನ್ನು ಡಿಲೀಟ್​ ಮಾಡಿಸಬಹುದು. ಇದು ಸ್ಪಷ್ಟವಾಗಿ ವ್ಯಂಗ್ಯಾತ್ಮಕ ಹಾಸ್ಯವಾಗಿತ್ತು. ಅವಳು ತಮಾಷೆಯನ್ನು ಇಷ್ಟಪಡಲಿಲ್ಲ ಮತ್ತು ನಾನು ಅದನ್ನು ಬದಲಾಯಿಸಬೇಕಾಗಿದೆ. ಅಲ್ಲದೇ ಇನ್ಮೇಲೆ ನಾನು ಎಕ್ಸ್​ ಗರ್ಲ್​ಫ್ರೆಂಡ್​ ಎಂದು ಹೇಳಬೇಕು ಎಂದು ಬರೆದಿದ್ದಾರೆ.

ಆದರೆ ಈ ಟ್ವೀಟ್​ ಟ್ವೀಟಿಗರಿಗೆ ಯಾಕೋ ಇಷ್ಟವಾದಂತೆ ಕಾಣಲಿಲ್ಲ. ಇಂತಹ ಕೆಟ್ಟ ಜೋಕ್​ನ್ನು ನಾವೆಲ್ಲೂ ಕಂಡೇ ಇಲ್ಲ ಎಂದು ಕಿಡಿ ಕಾರ್ತಿದ್ದಾರೆ.

— avg woke cancel culture kid (@oopspuruagain) July 5, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...