alex Certify ಪೋಸ್ಟ್ ಟೆಕ್ಸ್ಟಿಂಗ್ ಜಗತ್ತಿನಲ್ಲಿ ವೃದ್ಧರು ಹೇಗಿರುತ್ತಾರೆ…..? ಕರಾಳ ಕಾರ್ಟೂನ್​ ಶೇರ್​ ಮಾಡಿದ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಸ್ಟ್ ಟೆಕ್ಸ್ಟಿಂಗ್ ಜಗತ್ತಿನಲ್ಲಿ ವೃದ್ಧರು ಹೇಗಿರುತ್ತಾರೆ…..? ಕರಾಳ ಕಾರ್ಟೂನ್​ ಶೇರ್​ ಮಾಡಿದ ಉದ್ಯಮಿ

ನಮ್ಮಲ್ಲಿ ಹೆಚ್ಚಿನವರು ಮೊಬೈಲ್ ಫೋನ್‌ಗಳಿಗೆ ಸಾಕಷ್ಟು ವ್ಯಸನಿಯಾಗಿದ್ದೇವೆ. ಇತ್ತೀಚಿನ ದಿನಗಳಲ್ಲಿ, ಒಂದು ಬಟನ್‌ನ ಕ್ಲಿಕ್‌ನಲ್ಲಿ ಎಲ್ಲವೂ ಲಭ್ಯವಿರುತ್ತದೆ ಮತ್ತು ಅದು ನಮ್ಮ ಅವಲಂಬನೆಯನ್ನು ಹೆಚ್ಚಿಸುತ್ತಿದೆ. ಸರಿ, ನಾವು ಇದ್ದಕ್ಕಿದ್ದಂತೆ ಈ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂದು ನೀವು ಯೋಚಿಸುತ್ತಿರಬೇಕು. ಏಕೆಂದರೆ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್‌ನಲ್ಲಿ ಶೇರ್​ ಮಾಡಿಕೊಂಡಿರುವ ಕಾರ್ಟೂನ್‌ ಸಾಕಷ್ಟು ವೈರಲ್​ ಆಗಿದ್ದು, ಮೊಬೈಲ್​ ಫೋನ್​ನ ವ್ಯಸನದ ಕರಾಳತೆಯನ್ನು ಬಿಚ್ಚಿಡುತ್ತದೆ.

ಒಂದು ವಿಷಾದಕರ ಚಿತ್ರವನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಬರೀ ಸಂದೇಶಗಳನ್ನು ಕಳಿಸುವಲ್ಲಿ ನಿರತವಾಗಿರುವ ತಮ್ಮ ಪೋಸ್ಟ್-ಟೆಕ್ಸ್ಟಿಂಗ್ ಜಗತ್ತಿನಲ್ಲಿ ವೃದ್ಧಾಶ್ರಮದಲ್ಲಿರುವ ವೃದ್ಧರು ಮುಂದೊಂದು ದಿನ ಹೀಗೆ ಇರುತ್ತಾರೆ ಎನ್ನುವುದನ್ನು ಈ ಕಾರ್ಟೂನ್​ ತೋರಿಸಿದೆ.

ಬಿಜಾರೋ ಕಾಮಿಕ್ಸ್ ಮಾಡಿದ ಕಾರ್ಟೂನ್ ಇದಾಗಿದೆ. ಇದನ್ನು 2012 ರಲ್ಲಿ ರಚಿಸಲಾಗಿತ್ತು. ಇದರಲ್ಲಿ ವೃದ್ಧಾಶ್ರಮದಲ್ಲಿ ಇರುವ ವೃದ್ಧರನ್ನು ತೋರಿಸಲಾಗಿದೆ. 10 ವರ್ಷಗಳ ಹಿಂದೆ ಇನ್ನೂ ಈ ಪರಿಯಲ್ಲಿ ಮೊಬೈಲ್​ ಗೀಳು ಇಲ್ಲದಿರುವಾಗಲೇ ಈ ಕಾರ್ಟೂನ್​ ರಚಿಸಲಾಗಿತ್ತು. ಇದೀಗ ಅಕ್ಷರಶಃ ಇದೇ ರೀತಿ ವೃದ್ಧಾಶ್ರಮಗಳಲ್ಲಿ ವೃದ್ಧರನ್ನು ಕಾಣಬಹುದಾಗಿದೆ ಎಂದು ಅವರು ವಿಷಾದಿಸಿದ್ದಾರೆ.

ಕಾರ್ಟೂನ್​ನಲ್ಲಿ ವೃದ್ಧರ ಕುತ್ತಿಗೆಯನ್ನು ಅವರು ಮೊಬೈಲ್ ಫೋನ್‌ಗಳನ್ನು ನೋಡುತ್ತಿರುವಂತೆ ಬಾಗಿರುವುದು ಕಾಣಿಸುತ್ತದೆ. ಮತ್ತು ಅವರ ಕೈಗಳನ್ನು ಅವರು ಮೊಬೈಲ್​ ಇಲ್ಲದಿದ್ದರೂ ಅದನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ಈ ಕಾರ್ಟೂನ್​ ನೋಡಿದರೆ ಈಗಿನ ಯುವಕರು ವೃದ್ಧರಾದಾಗ ಬದುಕು ಎಷ್ಟು ಕರಾಳತೆಯಿಂದ ಕೂಡಿರಬಹುದು ಎಂಬ ಅರಿವು ಆಗುತ್ತದೆ ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...