alex Certify ಮಕ್ಕಳೆದುರು ತರಗತಿಯಲ್ಲೇ ಶಿಕ್ಷಕಿ ನೃತ್ಯ: ವೈರಲ್​ ವಿಡಿಯೋಗೆ ನೆಟ್ಟಿಗರು ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳೆದುರು ತರಗತಿಯಲ್ಲೇ ಶಿಕ್ಷಕಿ ನೃತ್ಯ: ವೈರಲ್​ ವಿಡಿಯೋಗೆ ನೆಟ್ಟಿಗರು ಕಿಡಿ

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ನೃತ್ಯ ಮಾಡುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗೀಗ ಹೆಚ್ಚುಚ್ಚು ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು, ಪರ-ವಿರೋಧ ಚರ್ಚೆ ಶುರುವಾಗಿದೆ.

ಶಿಕ್ಷಕಿಯೊಬ್ಬಳು ಭೋಜ್‌ಪುರಿ ಹಾಡಿಗೆ ನೃತ್ಯ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಶಿಕ್ಷಕಿಯ ಜತೆಗೆ ಅವರ ವಿದ್ಯಾರ್ಥಿಗಳು ಸಹ ಕಾಣಿಸಿಕೊಳ್ಳುತ್ತಾರೆ. ಭೋಜ್‌ಪುರಿ ಹಾಡಿನ ಪಾಟ್ಲಿ ಕಮಾರಿಯಾ ಮೋರಿಗೆ ತರಗತಿಯಲ್ಲೇ ಶಿಕ್ಷಕಿಯೊಬ್ಬರು ನೃತ್ಯ ಮಾಡುತ್ತಿದ್ದು, ವಿದ್ಯಾರ್ಥಿಗಳೂ ಸ್ಟೆಪ್​ ಹಾಕುತ್ತಿದ್ದಾರೆ.

ಈ ವಿಡಿಯೋ ಹಲವಾರು ಟ್ವಿಟರ್ ಬಳಕೆದಾರರನ್ನು ಕೆರಳಿಸಿದೆ. ಇದು ತರಗತಿಯ ಶಿಸ್ತಿಗೆ ವಿರುದ್ಧವಾಗಿದ್ದು, ಶಿಕ್ಷಕಿಯನ್ನು ಅಮಾನತುಗೊಳಿಸಬೇಕು ಎಂದು ಕೆಲವರು ಒತ್ತಾಯಿಸಿದರು. “ಈ ಮಹಿಳೆಯನ್ನು ತಕ್ಷಣದಿಂದ ತೆಗೆದುಹಾಕಬೇಕು. ಈಕೆ ಮಕ್ಕಳಿಗೆ ಅಸಭ್ಯತೆಯನ್ನು ಹರಡುತ್ತಿದ್ದಾರೆ ಎಂದು ಇನ್ನು ಹಲವರು ಬರೆದಿದ್ದಾರೆ.

ಇದೇ ವೇಳೆ ಕೆಲವರು ಶಿಕ್ಷಕಿಯ ಪರವಾಗಿಯೂ ಇದ್ದು, ಮಕ್ಕಳಿಗೆ ಶಿಕ್ಷಕಿ ನೃತ್ಯ ಕಲಿಸಿಕೊಡುತ್ತಿರುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...