alex Certify ಬರೋಬ್ಬರಿ 1.20 ಲಕ್ಷ ಜೋಡಿಗೆ ಬ್ರೇಕ್‌ ಅಪ್‌ ಮಾಡಿಸಿದ್ದಾನೆ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 1.20 ಲಕ್ಷ ಜೋಡಿಗೆ ಬ್ರೇಕ್‌ ಅಪ್‌ ಮಾಡಿಸಿದ್ದಾನೆ ಭೂಪ…!

ಪ್ರಕೃತಿಯ ಸಹಜ ಆಕರ್ಷಣೆ ಎಂದರೆ ವಿರುದ್ಧ ಲಿಂಗಗಳು. ಒಬ್ಬ ಹುಡುಗ ಮತ್ತು ಹುಡುಗಿ ನಡುವೆ ವಿಭಿನ್ನ ರೀತಿಯ ಯೌವ್ವನ ಅವಸ್ಥೆಯ ಆಕರ್ಷಣೆಗಳು, ಮಧ್ಯವಯಸ್ಕರಲ್ಲಿ ವಿಭಿನ್ನ ರೀತಿಯ ಸೆಳೆತಗಳು ಇರುವುದು ಸಹಜ. ಇಂಥದ್ದೇ ಮೋಹ ಬಂಧನದಲ್ಲಿ ಪ್ರೇಮಿಗಳು ಸಿಲುಕಿ, ಸಂತೋಷದ ಹಾಗೂ ಕೆಲವೊಮ್ಮೆ ವಿರಹದ ದಿನಗಳನ್ನು ಕಳೆಯುತ್ತಿರುತ್ತಾರೆ. ಒಬ್ಬರಿಗೆ ಮತ್ತೊಬ್ಬರದ್ದೇ ಸದಾಕಾಲ ಧ್ಯಾನ.

ಆದರೆ , ಸ್ಕಾಟ್‌ಲ್ಯಾಂಡಿನ ಹಾಸ್ಯಗಾರ ಡೇನಿಯಲ್‌ ಸ್ಲಾಸ್‌ ಎಂಬ ಯುವಕ ಮಾತ್ರ ಪ್ರೇಮಿಗಳನ್ನು ಬೇರ್ಪಡಿಸುವ ದೊಡ್ಡ ಪಾಪದ ಕೆಲಸ ಮಾಡಿಬಿಟ್ಟಿದ್ದಾನೆ..! ಹೌದು, ಅದು ಕೂಡ 1.20 ಲಕ್ಷ ಜೋಡಿಗಳ ನಡುವೆ ಬಿರುಕು ಅಥವಾ ಸಂಬಂಧ ಪೂರ್ಣವಾಗಿ ಕಡಿದು ಹೋಗುವಂತೆ ಮಾಡಿದ್ದಾನೆ. 2018 ರಲ್ಲಿ ಆತ ನಡೆಸಿಕೊಟ್ಟ ’ ಜಿಗ್‌ಸಾ’ ಎಂಬ ಕಾರ್ಯಕ್ರಮವೇ ಇವೆಲ್ಲದಕ್ಕೂ ಕಾರಣ. ಪ್ರೇಮ ಸಂಬಂಧಗಳ ಬಗ್ಗೆ ಡೇನಿಯಲ್‌ ಕಾರ್ಯಕ್ರಮದಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಾ ಮಾತನಾಡಿದ್ದಾನೆ.

ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಬೆಳ್ಳಿ 898 ರೂ., ಚಿನ್ನದ ದರ 375 ರೂ. ಇಳಿಕೆ

ಒಂಟಿಯಾಗಿ ಇರುವುದಕ್ಕಿಂತ ಸಂಗಾತಿ ಅಥವಾ ಜೋಡಿ ಜತೆಗೆ ಇರುವುದು ಬಹಳ ಉತ್ತಮ ಎಂಬ ಭಾವನೆ ಸಮಾಜದಲ್ಲಿ ಬೇರೂರಿದೆ. ಅದು ಬಹಳ ಸಲ ಸುಳ್ಳಿನ ಬುನಾದಿಯಲ್ಲಿ ನಿರ್ಮಾಣಗೊಂಡಿರುತ್ತದೆ. ಅಂಥ ಪೊಳ್ಳು ಪ್ರೇಮ ಸೌಧಗಳು ನನ್ನ ಕಾರ್ಯಕ್ರಮದಲ್ಲಿ ನಗುವಿನ ಜತೆಗಿನ ಅರಿವು ಮೂಡಿಸುವಿಕೆಯಿಂದ ಕುಸಿದು ಬೀಳುತ್ತವೆ ಎಂದು ಡೇನಿಯಲ್‌ ತನ್ನ ಸಂದರ್ಶನ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾನೆ.

ಮಜಾ ಎಂದರೆ, 31 ವರ್ಷ ಡೇನಿಯಲ್‌ ಕಳೆದ ವರ್ಷ ಕಾರಾ ಮಿಶೇಲ್‌ ಎಂಬ ಹುಡುಗಿಗೆ ವಿವಾಹ ಪ್ರಸ್ತಾವನೆ ಇರಿಸಿ ಪ್ರೇಮದಲ್ಲಿ ಮುಳುಗಿದ್ದಾನೆ. ನಿಶ್ಚಿತಾರ್ಥ ಕೂಡ ಮುಗಿಸಿಕೊಂಡಿರುವ ಜೋಡಿಯು, ಇನ್ನೇನು ಮದುವೆಯನ್ನೂ ಆಗಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...