alex Certify Viral Video | ನಾರಾಯಣ ಮೂರ್ತಿಯವರ 70 ಗಂಟೆ ಕೆಲಸ ಹೇಳಿಕೆಯ ಲೆಕ್ಕಾಚಾರ ಬಿಚ್ಚಿಟ್ಟ ಕಾಮಿಡಿಯನ್; ಆಧುನಿಕ ʼಜೀತಪದ್ಧತಿʼ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ನಾರಾಯಣ ಮೂರ್ತಿಯವರ 70 ಗಂಟೆ ಕೆಲಸ ಹೇಳಿಕೆಯ ಲೆಕ್ಕಾಚಾರ ಬಿಚ್ಚಿಟ್ಟ ಕಾಮಿಡಿಯನ್; ಆಧುನಿಕ ʼಜೀತಪದ್ಧತಿʼ ಎಂದ ನೆಟ್ಟಿಗರು

ಇನ್ಫೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನೀಡಿರುವ ಹೇಳಿಕೆಯು ವ್ಯಾಪಕ ಟ್ರೋಲ್​ ಗೆ ಒಳಗಾಗಿದೆ. ವಾರದಲ್ಲಿ 70 ಗಂಟೆ ಕೆಲಸವೇ ಮಾಡಿದರೆ ಪರಿಣಾಮ ಏನಾಗಬಹುದು ಎಂಬ ಚರ್ಚೆ ಜೋರಾಗಿದೆ.

ಈ ನಡುವೆ ಹೈದರಾಬಾದ್​ ಮೂಲದ ಕಾಮಿಡಿಯನ್​ ವಿವೇಕ್​ ಮುರಳೀಧರ್​ ಕಾರ್ಯಕ್ರಮವೊಂದರಲ್ಲಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಹಾಸ್ಯ ಚಟಾಕಿ ಹಾರಿಸಿದ್ದು ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಒಂದು ವೇಳೆ ನಾವು ವಾರದಲ್ಲಿ 70 ಗಂಟೆ ನಿಜವಾಗಿಯೂ ಕೆಲಸ ಮಾಡಿದರೆ ನಮ್ಮ ಜೀವನ ಹೇಗೆ ಇರಬಹುದು ಅನ್ನೋದನ್ನ ಹಾಸ್ಯಮಯವಾಗಿ ತಿಳಿಸಿದ್ದಾರೆ. ವಾರದಲ್ಲಿರುವ 168 ಗಂಟೆಯಲ್ಲಿ ನಿತ್ಯ 7 ಗಂಟೆ ನಿದ್ದೆಯ ಅವಧಿಯನ್ನು ಕಡಿತಗೊಳಿಸಿದ ಬಳಿಕ ಉಳಿದ ಸಮಯದಲ್ಲಿ ಒಬ್ಬ ಮನುಷ್ಯ ಹೇಗೆಲ್ಲ ಬದುಕಬೇಕಾಗಿ ಬರಬಹುದು ಅನ್ನೋದನ್ನ ಲೆಕ್ಕಾಚಾರ ಸಮೇತ ತಿಳಿಸಿದ್ದಾರೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದ್ದು ಸಾಕಷ್ಟು ಲೈಕ್ಸ್​ ಹಾಗೂ ಕಮೆಂಟ್​ಗಳನ್ನು ಪಡೆದುಕೊಂಡಿದೆ. ಅನೇಕರು ಕೋಟ್ಯಾಧಿಪತಿಗಳು ಎಂದಿಗೂ ಬಡವರನ್ನ ದಿನವಿಡೀ ದುಡಿಸೋಕೆ ನೋಡುತ್ತಾರೆ. ಇದು ಆಧುನಿಕ ಯುಗದ ಜೀತಪದ್ಧತಿ ಅಂತಾ ಹೇಳಿದ್ದಾರೆ. ಇನ್ನೂ ಕೆಲವರು ನಮಗೆ ನಾರಾಯಣಮೂರ್ತಿಯವರ ಮೇಲೆ ಗೌರವ ಇದೆ. ಆದರೆ ಒಬ್ಬ ವ್ಯಕ್ತಿಗೆ ಅತೀ ಕಡಿಮೆ ಸಂಬಳ ನೀಡಿ ಈ ರೀತಿ ದುಡಿಸಿಕೊಳ್ಳುವ ಬಗ್ಗೆ ಯೋಚಿಸೋದು ತಪ್ಪು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...