alex Certify Video | 3ನೇ ಹಂತದ ಸ್ತನ ಕ್ಯಾನ್ಸರ್ ಇರುವುದನ್ನು ಲೈವ್ ಕಾರ್ಯಕ್ರಮದಲ್ಲೇ ಹೇಳಿಕೊಂಡ ಖ್ಯಾತ ನಿರೂಪಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | 3ನೇ ಹಂತದ ಸ್ತನ ಕ್ಯಾನ್ಸರ್ ಇರುವುದನ್ನು ಲೈವ್ ಕಾರ್ಯಕ್ರಮದಲ್ಲೇ ಹೇಳಿಕೊಂಡ ಖ್ಯಾತ ನಿರೂಪಕಿ

ಜಾಗತಿಕ ಮಟ್ಟದ ಸುದ್ದಿವಾಹಿನಿ ಸಿ ಎನ್ ಎನ್ ನ ಖ್ಯಾತ ನಿರೂಪಕಿ ಸಾರಾ ಸಿಡ್ನರ್ ತಮಗೆ 3ನೇ ಹಂತದ ಸ್ತನ ಕ್ಯಾನ್ಸರ್ ಇರುವುದಾಗಿ ನೋವು ಹೊರಹಾಕಿದ್ದಾರೆ. ಟಿವಿ ಕಾರ್ಯಕ್ರಮದ ನೇರಪ್ರಸಾದ ವೇಳೆಯೇ ಭಾವನಾತ್ಮಕವಾಗಿ ತಮ್ಮ ನೋವನ್ನು ಹೊರಹಾಕಿದ 51 ವರ್ಷದ ಸಾರಾ 2 ನೇ ತಿಂಗಳಿನ ಕಿಮೋಥೆರಪಿ ಚಿಕಿತ್ಸೆಯಲ್ಲಿರುವುದಾಗಿ ತಿಳಿಸಿದ್ದಾರೆ.

ಟಿವಿಯಲ್ಲಿ ಮಾತನಾಡುತ್ತಾ “ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುವ ವೈಯಕ್ತಿಕ ಟಿಪ್ಪಣಿಯನ್ನು ಹೊಂದಿದ್ದೇನೆ. ನನಗೆ ಸ್ವಲ್ಪ ಅನುಕೂಲ ಮಾಡಿಕೊಡಬೇಕಾಗಿ ನಾನು ನಿಮ್ಮಲ್ಲಿ ಕೇಳುತ್ತಿದ್ದೇನೆ. ನೀವು ಪ್ರೀತಿಸುವ ಮತ್ತು ನಿಮಗೆ ತಿಳಿದಿರುವ ಎಂಟು ಮಹಿಳೆಯರ ಹೆಸರನ್ನು ನೆನಪಿಸಿಕೊಳ್ಳಿ. ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಬರುತ್ತದೆ. ಅಂತಹ ನನ್ನ ಸ್ನೇಹಿತರ ಗುಂಪಿನಲ್ಲಿ ನಾನು ಎಂಟರಲ್ಲಿ ಒಬ್ಬಳಾಗಿದ್ದೇನೆ. ನನ್ನ ಜೀವನದಲ್ಲಿ ನಾನು ಒಂದು ದಿನವೂ ಅನಾರೋಗ್ಯದಿಂದ ಬಳಲಿಲ್ಲ. ನಾನು ಧೂಮಪಾನ ಮಾಡುವುದಿಲ್ಲ, ಅಪರೂಪಕ್ಕೆ ಮದ್ಯಪಾನ ಮಾಡುತ್ತೇನೆ. ನನ್ನ ಕುಟುಂಬದಲ್ಲಿ ಯಾರಿಗೂ ಸ್ತನ ಕ್ಯಾನ್ಸರ್ ಇಲ್ಲ. ಆದರೆ ಇಲ್ಲಿ ನಾನು 3ನೇ ಹಂತದ ಸ್ತನ ಕ್ಯಾನ್ಸರ್‌ನೊಂದಿಗೆ ಇದ್ದೇನೆ. ಅದನ್ನು ಜೋರಾಗಿ ಹೇಳುವುದು ಕಷ್ಟ. ಬಹುಪಾಲು ಮಹಿಳೆಯರಿಗೆ 3ನೇ ಹಂತದ ಸ್ತನ ಕ್ಯಾನ್ಸರ್ ಮರಣದಂಡನೆಯಾಗಲ್ಲ. ಆದರೆ ಇಲ್ಲಿ ನಾನು ಸ್ತನ ಕ್ಯಾನ್ಸರ್ ಬಗ್ಗೆ ಸಂಶೋಧನೆ ಮಾಡಲು ಪ್ರಾರಂಭಿಸಿದಾಗ ನಿಜವಾಗಿಯೂ ಆಘಾತಗೊಂಡೆ. ಸ್ತನ ಕ್ಯಾನ್ಸರ್ ಹೊಂದಿರುವ ಕಪ್ಪು ಮಹಿಳೆಯರು ಬಿಳಿ ಮಹಿಳೆಯರಿಗಿಂತ ಸಾಯುವ ಸಾಧ್ಯತೆ ಶೇ. 41ರಷ್ಟು ಹೆಚ್ಚು ಎನ್ನುವುದು ಸಂಶೋಧನೆಯಲ್ಲಿ ಕಂಡು ಬಂದಿದೆ.

ಈ ಬಗ್ಗೆ ಎಚ್ಚರ ವಹಿಸಬೇಕು. ಎಲ್ಲ ಮಹಿಳೆಯರು ಪ್ರತಿವರ್ಷ ನಿಯಮಿತವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿಮ್ಮ ಸ್ವಯಂ ಪರೀಕ್ಷೆಯನ್ನು ಮಾಡಿ. ಆರಂಭಿಕ ಹಂತದಲ್ಲೇ ಅದನ್ನು ಕಂಡುಹಿಡಿಯಲು ಪ್ರಯತ್ನಿಸಿ,” ಎಂದು ಸಾರಾ ಸಿಡ್ನರ್ ಭಾವುಕರಾಗಿ ನುಡಿದರು.

ಇದಲ್ಲದೆ ಪ್ರಶಸ್ತಿ ವಿಜೇತ ಪತ್ರಕರ್ತೆ, ಇದು ನನಗೂ ಬರಬಹುದು ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಕ್ಯಾನ್ಸರ್ ಗೆ ಧನ್ಯವಾದ. ನಾವು ಎಷ್ಟೇ ಕಷ್ಟ ಅನುಭವಿಸಿದರೂ ಮತ್ತೂ ಜೀವನವನ್ನು ಗಾಢವಾಗಿ ಪ್ರೀತಿಸುತ್ತೇನೆ ಎನ್ನುವುದು ನನ್ನ ಅನುಭವಕ್ಕೆ ಬಂದಿದೆʼʼ ಎಂದು ಕಣ್ಣೀರು ಹಾಕುತ್ತಾ ಹೇಳಿದ್ದಾರೆ.

ನಾನು ಈಗ ಹೆಚ್ಚು ಸಂತೋಷವಾಗಿದ್ದೇನೆ. ನನಗೆ ಕಿರಿಕಿರಿ ಉಂಟುಮಾಡುವ ಮೂರ್ಖ ವಿಷಯಗಳ ಬಗ್ಗೆ ನಾನು ಒತ್ತು ನೀಡುವುದಿಲ್ಲ. ಈಗ ನಾನು ಪ್ರತಿಯೊಂದು ದಿನವನ್ನೂ ಸಂಭ್ರಮದಿಂದ ಕಾಣುತ್ತೇನೆ ಎಂದಿದ್ದಾರೆ.

ಆಫ್ರಿಕನ್-ಅಮೆರಿಕನ್ ತಂದೆ ಮತ್ತು ಬ್ರಿಟಿಷ್ ತಾಯಿಗೆ ಅಮೆರಿಕದಲ್ಲಿ ಜನಿಸಿದ ಸಿಡ್ನರ್ ಫ್ಲೋರಿಡಾದಲ್ಲಿ ಬೆಳೆದರು. ಗಡಿಯುದ್ದಕ್ಕೂ ವ್ಯಾಪಕ ಸುದ್ದಿಗಳನ್ನು ಕವರ್ ಮಾಡಿದ್ದು 2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯ ಬಗ್ಗೆ ಸಿಎನ್ಎನ್‌ ಸುದ್ದಿ ಪ್ರಸಾರ ಮಾಡುವಾಗ ಸಿಡ್ನರ್ ಕೂಡ ಇದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...